ಪ್ರತಿಭಾ ಕಾರಂಜಿ ಮಕ್ಕಳ ಹಬ್ಬವಾಗಲಿ

ಪ್ರತಿಭಾ ಕಾರಂಜಿ ಮಕ್ಕಳ ಹಬ್ಬವಾಗಲಿ

ಕುಂಬಳೂರು: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ  ಬಿಇಒ ಹನುಮಂತಪ್ಪ

ಮಲೇಬೆನ್ನೂರು, ಅ. 6- ಮಕ್ಕಳ ಪ್ರತಿಭೆ ಹೊರ ಹಾಕುವ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಹಬ್ಬವಾಗಲಿ ಎಂದು ಬಿಇಓ ಹನುಮಂತಪ್ಪ ಹೇಳಿದರು.

ಅವರು ಗುರುವಾರ ಕುಂಬಳೂರು ಗ್ರಾಮದ ಬಸವ ಗುರುಕುಲ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕುಂಬಳೂರು ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಮಕ್ಕಳಿಗೆ ಈ ಕಾರ್ಯಕ್ರಮ ವರದಾನವಾಗಿದ್ದು, ಮಕ್ಕಳ ಪ್ರತಿಭೆಯನ್ನು ಮತ್ತಷ್ಟು ಬೆಳೆಸುವ ಕೆಲಸವನ್ನು ಶಿಕ್ಷಕರು ಈ ಕಾರ್ಯಕ್ರಮದ ಮೂಲಕ ಮಾಡಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಪ್ಪ ಹೇಳಿದರು.

ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಉಮಾದೇವಿ ಎಂ.ಹೆಚ್. ಶಿವರಾಮಚಂದ್ರಪ್ಪ ಮಾತ ನಾಡಿ, ನಾವು ಓದುವಾಗ ಈ ರೀತಿಯ ಕಾ ರ್ಯಕ್ರಮಗಳು ಮತ್ತು ಶಿಕ್ಷಣಕ್ಕೆ ಇಷ್ಟೊಂದು ಪ್ರೋತ್ಸಾಹ ಇರಲಿಲ್ಲ. ಈಗಿನ ವಿದ್ಯಾರ್ಥಿಗಳು ಪುಣ್ಯವಂತರಾಗಿದ್ದು, ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಕೊಂಡು ದೇಶದ ಉತ್ತಮ ಪ್ರಜೆಗಳಾಗಿ ಬೆಳೆಯಿರಿ ಎಂದು ಕರೆ ನೀಡಿದರು.

ಬಸವ ಗುರುಕುಲ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಳೇಮನಿ ಶಂಭುಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ರಾದ ಕೆ. ತೀರ್ಥಪ್ಪ, ಗ್ರಾ.ಪಂ. ಸದಸ್ಯರೂ, ಸ.ಹಿ.ಪ್ರಾ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೆ.ಹೆಚ್. ನಾಗೇಂದ್ರಪ್ಪ ಮಾತನಾಡಿದರು.

ಈ ವೇಳೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ  ಮಲೇಬೆನ್ನೂರಿನ ಎಸ್‌ಬಿಕೆಎಂ ಶಾಲೆಯ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಗ್ರಾ.ಪಂ. ಉಪಾಧ್ಯಕ್ಷ ನಾಗೋಳ್ ಕಲ್ಲೇಶ್, ವಿದ್ಯಾಸಂಸ್ಥೆಯ ಖಜಾಂಚಿ ಬಿ.ಎಂ. ಹನುಮಂತಪ್ಪ, ಸದಸ್ಯ ಎಸ್. ನಾಗರಾಜಪ್ಪ, ಸಿಆರ್‌ಪಿಗಳಾದ ನಂಜುಂಡಪ್ಪ, ಎಸ್.ಎನ್. ರೂಪಾ, ಸತೀಶ, ಬಸವರಾಜಯ್ಯ, ಜಾಮೀಯಾ ಶಾಲೆಯ ಮುಖ್ಯ ಶಿಕ್ಷಕ ಮಹಮದ್ ಇಲಿಯಾಜ್, ಶಿಕ್ಷಕ ಹೆಚ್. ಶಶಿಕುಮಾರ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಎಂ.ಹೆಚ್. ಶರಣ್ ಮತ್ತಿತರರು ಭಾಗವಹಿಸಿದ್ದರು. 

ಶರಣ ಸಂಗಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್. ಗುಂಡಣ್ಣನವರ್ ಸ್ವಾಗತಿಸಿದರು. ಶಿಕ್ಷಕ ಗಿರೀಶ್ ಗಂಟೇರ್ ನಿರೂಪಿಸಿದರು.

error: Content is protected !!