ಜಿಗಳಿಯಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ

ಜಿಗಳಿಯಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ

ಮಲೇಬೆನ್ನೂರು, ಅ. 5- ಜಿಗಳಿ ಗ್ರಾ.ಪಂ. ಕಛೇರಿ ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಗಾಂಧಿ ಜಯಂತಿ ಅಂಗವಾಗಿ ಗ್ರಾ.ಪಂ. ಕಛೇರಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾ.ಪಂ. ಕಾರ್ಯದರ್ಶಿ ಸುಜಾತ ಅವರು, ಗಾಂಧೀಜಿ ಮತ್ತು ಶಾಸ್ತ್ರೀಜಿ ಕುರಿತು ಮಾತನಾಡಿದರಲ್ಲದೇ ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯ ತಿಳಿಸಿದರು.

ಗ್ರಾ.ಪಂ. ಸದಸ್ಯ ಜಿ. ಬೇವಿನಹಳ್ಳಿಯ ಆನಂದಗೌಡ ಮಾತನಾಡಿ, ನಮ್ಮ ಗ್ರಾ.ಪಂ.ಗೆ ಈ ವರ್ಷ ಗಾಂಧಿ ಗ್ರಾಮ ಪುರಸ್ಕಾರ ಸಿಕ್ಕಿರುವುದು ನಮ್ಮೆಲ್ಲರ ಶ್ರಮಕ್ಕೆ ಪ್ರತಿಫಲವಾಗಿದೆ ಎಂದರು.

ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ಗುಡ್ಡಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ, ಪತ್ರಕರ್ತ ಪ್ರಕಾಶ್ ಅವರು ಗಾಂಧೀಜಿ ಅವರು ಸ್ವಾತಂತ್ರ್ಯಕ್ಕಾಗಿ ನಡೆಸಿದ ಅಹಿಂಸಾ ಹೋರಾಟದಿಂದಾಗಿ ಭಾರತ ಅಂದೇ ಜಗತ್ತಿನ ಗಮನ ಸೆಳೆದಿತ್ತು ಎಂದು ತಿಳಿಸಿದರು.

ಗ್ರಾ.ಪಂ. ಸದಸ್ಯರಾದ ಎನ್.ಎಂ. ಪಾಟೀಲ್, ಡಿ.ಎಂ. ಹರೀಶ್, ಕೆ.ಜಿ. ಬಸವರಾಜ್, ಶ್ರೀಮತಿ ಕರಿಯಮ್ಮ, ಶ್ರೀಮತಿ ವಿನೋದ ಜಿ.ಆರ್. ಹಾಲೇಶ್‌ಕುಮಾರ್, ಶ್ರೀಮತಿ ಮಂಜುಳಾ ಸಿ.ಎನ್. ಪರಮೇಶ್ವರಪ್ಪ, ಜಿ. ಬೇವಿನಹಳ್ಳಿಯ ದೇವರಾಜ್, ಬಿ.ಕೆ. ರಂಗನಾಥ್, ಕಲಾವಿದ ಡಿ. ರಂಗನಾಥ್, ಕೆ.ಎನ್. ಅಣ್ಣಪ್ಪ, ನಿಟುವಳ್ಳಿ ಕರಿಬಸಪ್ಪ, ಗ್ರಾ.ಪಂ. ಸಿಬ್ಬಂದಿಗಳಾದ ಬಿ. ಮೌನೇಶ್, ಪ್ರಕಾಶ್, ಬಸವರಾಜಯ್ಯ, ಮುತ್ತು,  ರಂಗನಾಥ್, ಸ.ಹಿ.ಪ್ರಾ. ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಿ. ಪ್ರಭಾಕರ್, ಮಾಜಿ ಅಧ್ಯಕ್ಷರಾದ ಎಕ್ಕೆಗೊಂದಿ ರುದ್ರಗೌಡ, ಜಿ.ಆರ್. ಚಂದ್ರಪ್ಪ, ಟಿ.ಎಸ್. ಗದಿಗೆಪ್ಪ, ಎಂ.ಆರ್. ನಾಗರಾಜ್, ಎಸ್‌ಡಿಎಂಸಿ ಸದಸ್ಯರಾದ ರೇಣುಕಮ್ಮ, ಪ್ರಿಯಾ, ಮಂಜುಳಾ, ಡಿ.ಪಿ. ಚಿದಾನಂದ್, ಮುಖ್ಯ ಶಿಕ್ಷಕ ಜಿ. ನಾಗೇಶ್, ಶಿಕ್ಷಕರಾದ ಮಲ್ಲಿಕಾರ್ಜುನ್, ಲಿಂಗರಾಜ್, ಲೋಕೇಶ್, ಜಯಶ್ರೀ, ಕರಿಬಸಮ್ಮ, ದೀಪಾ, ಶ್ರೀನಿವಾಸ್ ರೆಡ್ಡಿ ಮತ್ತು ಆಶಾ ಕಾರ್ಯಕರ್ತೆಯರು, ಅಡುಗೆ ಸಹಾಯಕರು ಭಾಗವಹಿಸಿದ್ದರು.

error: Content is protected !!