ಹರಿಹರ : ಗಾಂಧಿ ಮೈದಾನದಲ್ಲಿ 13 ಅಡಿ ಎತ್ತರದ ಗಣಪ

ಹರಿಹರ : ಗಾಂಧಿ ಮೈದಾನದಲ್ಲಿ 13 ಅಡಿ ಎತ್ತರದ ಗಣಪ

ಹರಿಹರ, ಸೆ. 19 – ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿಯ ವತಿಯಿಂದ 13 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಚಂದ್ರಯಾನ 3 ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ.

ಸೋಮವಾರ ಸಂಜೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಸ್. ರಾಮಪ್ಪ,  ತಾಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಸುರೇಶ್ ಹಾದಿಮನಿ, ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಪೂರ್, ಸದಸ್ಯ ಶಂಕರ್ ಖಟಾವ್ಕರ್,  ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ.ಜಿ. ಸಿದ್ದೇಶ್, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ನೋಟದರ್, ಸಚ್ಚಿನ್ ಕೊಂಡಜ್ಜಿ, ಜಿ.ವಿ. ಪ್ರವೀಣ್, ಕಿರಣ್ ಭೂತೆ, ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ, ರಟ್ಟಿಹಳ್ಳಿ ವಿಜಯ ಕುಮಾರ್, ಖಜಾಂಚಿ ಇ. ಮಂಜುನಾಥ್, ಕಾಂಗ್ರೆಸ್ ಮಹಿಳಾ ಮುಖಂಡರಾದ ಭಾಗ್ಯಮ್ಮ, ನಾಗಮ್ಮ, ಮಾಲಾ, ಕೆ.ಜಿ. ರಾಜು, ಮಂಜುನಾಥ್, ಎ.ಬಿ. ಪೃಥ್ವಿರಾಜ್, ಕಾರ್ತಿಕ್, ಚಿದಂಬರಂ ಜೋಯಿಸರು, ಲಕ್ಷ್ಮಿಕಾಂತ್ ಜೋಯಿಸರು, ರಾಮು, ನಾರಾಯಣ, ಅರುಣ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!