ಸಾಲ ಬಾಧೆಗೆ ಮತ್ತೊಬ್ಬ ರೈತನ ಬಲಿ

ಸಾಲ ಬಾಧೆಗೆ ಮತ್ತೊಬ್ಬ ರೈತನ ಬಲಿ

ರಾಣೇಬೆನ್ನೂರು, ಸೆ.19- ಸಾಲ ಬಾಧೆಗೆ ಮುಷ್ಠೂರು ಗ್ರಾಮದ ರೈತ ಜಗದೀಶ ಶಿದ್ದಪ್ಪ ಜಾನಪ್ಪನವರ (36)  ಇಂದು ಬಲಿಯಾಗಿದ್ದು, ವಾರದಲ್ಲಿ ಇಂತಹ 4-5 ಪ್ರಕರಣಗಳು ಜಿಲ್ಲೆಯಲ್ಲಿ ಜರುಗುತ್ತಿದ್ದರೂ ನಮಗೂ-ರೈತರಿಗೂ ಸಂಬಂಧವೇ ಇಲ್ಲ ಎನ್ನುವಂತೆ ಜಿಲ್ಲಾಡಳಿತ ವರ್ತಿಸುತ್ತಿರುವ ಮೂಲಕ ಗಾಢ ನಿದ್ರೆಯಲ್ಲಿದೆ ಎಂದು ರೈತ ಮುಖಂಡ ರವೀಂದ್ರ ಪಾಟೀಲ್ ಆರೋಪಿಸಿದರು.

ಆತ್ಮಹತ್ಯೆ ಮಾಡಿಕೊಂಡ ಮುಷ್ಠೂರ ಗ್ರಾಮದ ರೈತ ಜಗದೀಶ ಶಿ. ಜಾನಪ್ಪನವರ ಇವರ ಶವ ಸಂಸ್ಕಾರದ ಹತ್ತಿರ ಕುಟುಂಬಸ್ಥರು, ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ರೈತರ ಬಗೆಗಿನ ನಿರ್ಲಕ್ಷ್ಯೆ ಧೋರಣೆ, ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಹಗುರವಾದ ತೀರ್ಮಾನ. ಅಂಕಿ-ಅಂಶಗಳ ಮರೆಮಾಚುವಿಕೆ. ಸರ್ಕಾರವನ್ನು ಮುಜುಗರಕ್ಕೀಡು ಮಾಡುತ್ತಿರುವ ಜಿಲ್ಲಾಧಿಕಾರಿಯನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ದಿಳ್ಳೆಪ್ಪ ಗಂದಣ್ಣನವರ, ಬಸವರಾಜ ಯಲ್ಲಕ್ಕನವರ, ಪ್ರಶಾಂತರಡ್ಡಿ ಯರೇಕುಪ್ಪಿ, ಹರಿಹರಗೌಡ ಪಾಟೀಲ, ಮಲಕಪ್ಪ ಲಿಂಗದಹಳ್ಳಿ, ತಿಪ್ಪೇಶ ಕಡ್ಲಿಗುಂದಿ, ಶಾಂತವ್ವ ಹಿರೇಮಠದ, ಗಿರಿಜವ್ವ ನಾಯಕ, ಸೋಮಶೇಖರ ಜಾನಪ್ಪನವರ ಮುಂತಾದವರು ಭಾಗವಹಿಸಿದ್ದರು. 

error: Content is protected !!