ಇಷ್ಟಲಿಂಗ ಪೂಜೆಯ ಮೂಲಕ ಧರ್ಮಾಚರಣೆ ಬೆಳೆಸಿಕೊಳ್ಳಬೇಕು

ಇಷ್ಟಲಿಂಗ ಪೂಜೆಯ ಮೂಲಕ ಧರ್ಮಾಚರಣೆ ಬೆಳೆಸಿಕೊಳ್ಳಬೇಕು

ರಾಣೇಬೆನ್ನೂರಿನ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಹಿತನುಡಿ

ರಾಣೇಬೆನ್ನೂರು, ಸೆ.13- ಮನುಷ್ಯನ ದೇಹದಲ್ಲಿರುವ ನರಗಳನ್ನು ಜೋಡಿಸಿದರೆ ಈ ಭೂಮಂಡಲವನ್ನು ಸುತ್ತಿಬರುವಷ್ಟು ಉದ್ದವಾಗುತ್ತವೆ.  ಹಾಗಾಗಿ ಮನುಷ್ಯರನ್ನು `ನರರು’ ಎಂದು ಕರೆಯುತ್ತಾರೆ. ಸಾವಿರಾರು ವರ್ಷಗಳ ಹಿಂದೆ ಮಂತ್ರೋ ಚ್ಛಾರಣೆ ಮೂಲಕ ರೋಗ ನಿವಾರಣೆ ಮಾಡಿಕೊಳ್ಳುತ್ತಿದ್ದರು. ಆಗ   ಆಧುನಿಕ ರೀತಿಯಲ್ಲಿ ರೋಗ ನಿವಾರಣೆ ಮಾಡಿಕೊ ಳ್ಳಲು  ಈಗಿನಂತಹ ವ್ಯವಸ್ಥೆ ಇರಲಿಲ್ಲ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ನುಡಿದರು.

ಜಗದ್ಗುರುಗಳು ರಾಣೇಬೆನ್ನೂರಿನಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ, ಧರ್ಮ ಸಭೆಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಿದ್ದರು.   ವಿವಿಧ   ಲಿಂಗಾಯ ನಮಹ ಮಂತ್ರಗಳನ್ನು ಭಾವ ತುಂಬಿ ಪಠಿಸುತ್ತಿದ್ದರು. ಹಾಗಾಗಿ ಅಂದಿನ ಜನರು ರೋಗ ನಿವಾರಣ ದಂತಹ ಶಕ್ತಿಯನ್ನು ಪಡೆದುಕೊ ಳ್ಳುತ್ತಿದ್ದರು. ಈಗ ಆಧುನಿಕ ವಿಧಾನಗಳ  ಬಳಕೆ ಮೂಲಕ ಪ್ರಯತ್ನಿಸಿದರೂ ರೋಗ ನಿವಾರಣೆ ಕಷ್ಟಸಾಧ್ಯ ವಾಗಲಿದೆ ಎಂದು ಶ್ರೀ ಗಳು ನುಡಿದರು     

ಇತ್ತಿತ್ತಲಾಗಿ ಧರ್ಮಾಚರಣೆಯಲ್ಲಿ ನಿರಾಸಕ್ತಿ ಕಂಡು ಬರುತ್ತಿದ್ದು, ಇಷ್ಟಲಿಂಗ ಪೂಜೆಯಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಧಾರ್ಮಿಕ ಭಾವನೆ ಅರಳಿಸಬೇಕು ಎಂದು, ಕುರುಬ ಗೊಲ್ಲಾಳ ಹಾಗೂ ಕುಂಬಾರ ಗುಂಡಯ್ಯ ಅವರ ಕತೆಗಳನ್ನು ಹೇಳಿ ಅವರಂತೆ ಧಾರ್ಮಿಕ ಪರಂಪರೆಯಲ್ಲಿ ಮನಸ್ಸುಗಳನ್ನು ತೊಡಗಿಸಿಕೊಳ್ಳುವಂತೆ ಶ್ರೀಗಳು ಕರೆ ನೀಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ, ಅರಣ್ಯ ಅಭಿವೃದ್ಧಿ ಮಾಜಿ ನಿರ್ದೇಶಕಿ ಭಾರತಿ ಜಂಬಗಿ, ಸಿದ್ದು ಚಿಕ್ಕಬಿದರಿ, ಶಿವಪ್ಪ ಗುರಿಕಾರ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ,  ರಾಜು ಮೋಟಗಿ, ನಗರಸಭೆ ಸದಸ್ಯ ಪ್ರಕಾಶ ಪೂಜಾರ, ಸದಸ್ಯೆ ಕಸ್ತೂರಿ ಚಿಕ್ಕಬಿದರಿ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ಸಿಪಿಐ ಗೌಡಪ್ಪಗೌಡ್ರ ಮತ್ತಿತರರಿದ್ದರು.

error: Content is protected !!