11ನೇ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಬಿ.ಸಿ. ಉಮಾಪತಿ ಹರ್ಷ
ದಾವಣಗೆರೆ, ಸೆ.13- ಹರ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತವು ಪ್ರಗತಿಯ ಮುಂಚೂಣಿಯಲ್ಲಿದೆ ಎಂದು ಸಹಕಾರಿಯ ಅಧ್ಯಕ್ಷ ಬಿ.ಸಿ.ಉಮಾಪತಿ ಹರ್ಷ ವ್ಯಕ್ತಪಡಿಸಿದರು.
ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕ್ ಸಹಕಾರ ಸಮು ದಾಯ ಭವನದಲ್ಲಿ ಮೊನ್ನೆ ಜರುಗಿದ ಸಹಕಾರಿಯ 2022-23ನೇ ಸಾಲಿನ 11ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರಿಯು 2022-23ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ 50.56 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಷೇರು ಲಾಭಾಂಶ ಘೋಷಣೆ ಮಾಡುವ ಮೂಲಕ ಅಭಿವೃದ್ದಿ ಪಥದಲ್ಲಿ ಸಾಗಿದೆ. ಠೇವಣಿ ಸಂಗ್ರಹ ಹಾಗೂ ಸಾಲ ವಸೂಲಾತಿಯಲ್ಲಿ ಗಮನಾರ್ಹ ಪ್ರಗತಿ ಕಂಡಿದ್ದು ಇದಕ್ಕೆ ಸದಸ್ಯರ ಸಹಕಾರ ಪ್ರಮುಖ ಕಾರಣ ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ 1.15 ಲಕ್ಷ ರೂ ಷೇರು ಬಂಡವಾಳವಿದ್ದು, ಆರ್ಥಿಕ ವರ್ಷಾಂತ್ಯಕ್ಕೆ 1.39 ಕೋಟಿ ಷೇರು ಬಂಡವಾಳ ಹೊಂದಿದೆ. ಆರ್ಥಿಕ ವರ್ಷಾಂತ್ಯಕ್ಕೆ 12.06 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ. ಪ್ರಸ್ತುತ ಸಹಕಾರಿಯು 10.42 ಕೋಟಿ ರೂಗಳ ಸಾಲವನ್ನು ಸದಸ್ಯರಿಗೆ ವಿತರಿಸಿದೆ ಎಂದು ತಿಳಿಸಿದರು.
ಪಂಚಮಸಾಲಿ ಪೀಠದ ಜಗ ದ್ಗುರು ಶ್ರೀ ವಚನಾನಂದ ಸ್ವಾಮೀಜಿ ಸಭೆ ಉದ್ಘಾಟಿಸಿ, ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಸಹಕಾರಿಯ ವಿಶೇಷ ಆಹ್ವಾನಿತರಾದ ಬಾದಾಮಿ ಜಯಣ್ಣನವರು 2022-23ನೇ ಸಾಲಿನ ಸಾಮಾನ್ಯ ಸಭೆಯ ಆಹ್ವಾನ ಪತ್ರಿಕೆ ಮಂಡಿಸಿದರು. ನಿರ್ದೇಶಕ ಅಂದನೂರು ಮುರುಗೇಶಪ್ಪ ಕಳೆದ ಸಾಲಿನ ಸಾಮಾನ್ಯ ಸಭೆಯ ನಡಾವಳಿಗಳನ್ನು ಓದಿ ದಾಖಲು ಮಾಡಿದ ನಂತರ ವಿಶೇಷ ಆಹ್ವಾನಿತ ಶಿವಕುಮಾರ್ ಕೆ 2022-23ನೇ ಸಾಲಿನ ಆಡಳಿತ ವರದಿಯನ್ನು ಸಭೆಯ ಮುಂದೆ ಮಂಡಿಸಿದರು.
ಕಾರ್ಯದರ್ಶಿ ಚನ್ನಮಲ್ಲಿಕಾ ರ್ಜುನ ಕೆ. ಲಾಭ-ನಷ್ಟ ಮತ್ತು ಅಢಾವೆ ಪತ್ರಗಳನ್ನು ಮಂಡಿಸಿದರು. ಸಹಕಾರ್ಯದರ್ಶಿ ಮಲ್ಲಿಕಾರ್ಜುನ ಎಂ. ಲೆಕ್ಕಪರಿಶೋಧನಾ ವರದಿಯ ಸೂಚನೆಗಳಿಗೆ ಆಡಳಿತ ಮಂಡಳಿ ಸಲ್ಲಿಸಿದ ಪಾಲನಾ ವರದಿ ಮಂಡಿಸಿದರು.
ಉಪಾಧ್ಯಕ್ಷ ಎಂ ದೊಡ್ಡಪ್ಪ 2022-23ನೇ ಸಾಲಿನ ಲಾಭ ವಿಲೇ ವಾರಿಯನ್ನು ಮಂಡಿಸಿ ಶೇ.10ರಷ್ಟು ಷೇರು ಲಾಭಾಂಶ ಘೋಷಿಸಿದರು.
ನಿರ್ದೇಶಕ ಚೈತನ್ಯಕುಮಾರ ಸಿ.ಬಿ. 2023-24ನೇ ಸಾಲಿನ ಮುಂಗಡ ಪತ್ರ ಮಂಡಿಸಿದರು. ಶಿವಶಂಕರ್ ಕೈದಾಳೆ, ವಾರ್ಷಿಕ ಕಾರ್ಯಾಚರಣೆ ಯೋಜನೆ ಮಂಡಿಸಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ 15 ಕೋಟಿ ರೂ. ಠೇವಣಿ ಸಂಗ್ರಹಣೆಯ ಗುರಿ, ನಿವ್ವಳ 53.98 ಲಕ್ಷ ರೂ.ಲಾಭ ಗಳಿಕೆಯ ಗುರಿ ಹೊಂದಲಾಗಿದೆ ಎಂದರು.
ನಿಕಟಪೂರ್ವ ನಿರ್ದೇಶಕರಾದ ಶ್ರೀಮತಿ ವಿನುತಾ ಎಂ.ವಿ. ಶ್ರೀಮತಿ ಗೀತಾ ಪ್ರಶಾಂತ್, ರಮೇಶ ಡಿ, ರವಿಕುಮಾರ ಪಿ.ವಿ, ಬಾದಾಮಿ ಚಂದ್ರಶೇಖರ್, ಸುಂಕದ ಜಿ.ವಿ, ಮಂಜುನಾಥ ಎಸ್. ಇವರಗಳನ್ನು ಗೌರವಿಸಲಾಯಿತು.
ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಕಾಲಕ್ಕೆ ಸಾಲ ಮರುಪಾವತಿ ಮಾಡಿದ ಸದಸ್ಯರನ್ನು ಸನ್ಮಾನಿಸಲಾಯಿತು. ನಿರ್ದೇಶಕರುಗ ಳಾದ ನಾಗರಾಜ ಹೆಚ್.ಎಂ , ಹಾಲೇಶ ಅಂಗಡಿ, ಶ್ರೀಮತಿ ಪುಷ್ಪಾ ವತಿ ಹೆಚ್.ವಿ., ಯೋಗೇಶ ಹೆಚ್. ಎಸ್., ಹೆಚ್.ಎಸ್.ಅವ್ವಣ್ಣಪ್ಪ, ಎಸ್.ಮಲ್ಲನಗೌಡ್ರು, ಎಸ್.ಎಂ. ಸ್ವಾಮಿ, (ವಾಣಿ ಶಿವಣ್ಣ) ಉಪಸ್ಥಿತರಿದ್ದರು. ನಿರ್ದೇಶಕರಾದ ಶ್ರೀಮತಿ ಅನಿತಾ ಸಿ.ಪಿ ಸ್ವಾಗತಿಸಿದರು. ಅಂಗಡಿ ಸಂಗಮೇಶ್, ಕಲಿವೀರ ಕಳ್ಳಿಮನಿ, ಕುಬೇರಪ್ಪ ಬಿ.ಯು. ನಿರೂಪಿಸಿದರು.