ದಾವಣಗೆರೆ, ಸೆ. 6 – ನಗರದ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ವತಿಯಿಂದ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ಬೆಳಗಾಂ ವಲಯದ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿ ಏರ್ಪಡಿಸಲಾಗಿತ್ತು.
ಕಾಲೇಜಿನ ನಿರ್ದೇಶಕರಾದ ಡಾ|| ವಸುಂಧರಾ ಶಿವಣ್ಣ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದವರು ಪಠ್ಯ ಚಟುವಟಿಕೆಗಳಿಗೆ ಅಲ್ಲದೇ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು,
ಇವುಗಳು ಕೇವಲ ಮಾನಸಿಕವಲ್ಲದೇ, ದೈಹಿಕ ಬೆಳವಣಿಗೆಗೂ ಅನುಕೂಲವಾಗುವಂತೆ ಮಾಡಿದ್ದಾರೆ. ಇದರ ಸದುಪಯೋಗ ಮಾಡಿಕೊಂಡು ದಾವಣಗೆರೆಯ ಆತಿಥ್ಯವನ್ನು ಬೆಣ್ಣೆ ದೋಸೆಯೊಂದಿಗೆ ಸವಿಯಿರಿ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ|| ಐ.ಎಂ.ಅಲಿಯವರು ಹಾಗೂ ವಿಭಾಗದ ಮುಖ್ಯಸ್ಥ ಡಾ|| ಧನ್ಯಕುಮಾರ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಪಿ. ವಿಷ್ಣು, ಕೆ.ಎನ್. ಗೋಪಾಲಕೃಷ್ಣ, ತೀರ್ಪುಗಾರರಾದ ದರ್ಶನ್ ಹಾಗೂ ಪಂದ್ಯಾವಳಿಯ ಆಯೋಜಕ ಕಾರ್ಯದರ್ಶಿ ಸಿ.ಪಿ. ಮಹೇಶ್ ವೇದಿಕೆಯಲ್ಲಿ ಹಾಜರಿದ್ದರು. ಮುಕ್ತ ಕಾರ್ಯಕ್ರಮ ನಿರೂಪಿಸಿದರು.
ಡಾ. ವಸುಂಧರಾ ಶಿವಣ್ಣ ಬಾಸ್ಕೆಟ್ ಬಾಲ್ ಶೂಟ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.