ಮಾರುಕಟ್ಟೆ ಮೌಲ್ಯ ಅವೈಜ್ಞಾನಿಕ ಏರಿಕೆ ವಿವಿಧ ಸಂಘಟನೆಗಳ ಪ್ರತಿಭಟನೆ

ಮಾರುಕಟ್ಟೆ ಮೌಲ್ಯ ಅವೈಜ್ಞಾನಿಕ ಏರಿಕೆ ವಿವಿಧ ಸಂಘಟನೆಗಳ ಪ್ರತಿಭಟನೆ

ಜಗಳೂರು, ಸೆ.6- ಉಪನೋಂದಣಿ‌ ಅಧಿಕಾರಿಗಳು ಸ್ಥಿರ ಸ್ವತ್ತುಗಳ ಮಾರುಕಟ್ಟೆ ಮೌಲ್ಯವನ್ನು  ಶೇ.25 ರಿಂದ ಶೇ.30 ರಷ್ಟು ಏರಿಕೆ ಮಾಡುವ ಬದಲು ಶೇ. 100 ರಷ್ಟು ಏರಿಕೆ ಮಾಡಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮತ್ತು ಉಪನೋಂದಣಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ  ನೋಂದಣಿ ಮಾರುಕಟ್ಟೆ ದರವನ್ನು ಶೇ.25 ರಿಂದ ಶೇ.30 ರಷ್ಟು ಏರಿಕೆ ಮಾಡಲು ಸೂಚನೆ ನೀಡಿದ್ದರೂ ಅಧಿಕಾರಗಳು ಮನಸ್ಸಿಗೆ ಬಂದಂತೆ ಏರಿಕೆ ಮಾಡಿ ರೈತರಿಗೆ, ಸಾರ್ವಜನಿಕರಿಗೆ ಅನ್ಯಾಯ ಮಾಡಿದ್ದಾರೆ.

ಶೇಕಡಾ ನೂರರಷ್ಟು ಏರಿಕೆ ಮಾಡಿರುವ ಮಾಹಿತಿಯನ್ನೂ ಸಹ  ಸಾರ್ವಜನಿಕರಿಗೆ ಸರಿಯಾಗಿ ತಿಳಿಸಿಲ್ಲ ಎಂದು ಆರೋಪಿಸಿದರು.

ಜಗಳೂರು ತಾಲ್ಲೂಕು ಬರಪೀಡಿತ ತಾಲ್ಲೂಕು ಆಗಿದ್ದು, ರೈತರಿಗೆ ತೊಂದರೆಯಾಗದಂತೆ ಸರ್ಕಾರದ ಸೂಚನೆಯಂತೆ ಮಾರುಕಟ್ಟೆ ಮೌಲ್ಯವನ್ನು ಶೇ.25 ರಿಂದ ಶೇ.30 ರಷ್ಟು ಮಾತ್ರ ಏರಿಕೆ ಮಾಡಬೇಕು ಎಂದು ಹೋರಾಟ ಸಮಿತಿ ಮುಖಂಡ ವಕೀಲ ಆರ್. ಓಬಳೇಶ್ ಆಗ್ರಹ ಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಮುಖಂಡರಾದ ರಕ್ಷಣಾ ವೇದಿಕೆಯ ಮಹಾಂತೇಶ್, ದ.ಸಂ.ಸ. ಮುಖಂಡ ಸತ್ಯಮೂರ್ತಿ, ತಿಪ್ಪೇಸ್ವಾಮಿ, ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!