ಕೊಟ್ಟೂರು : ಕಾಯಕದ  ಮಹತ್ವ ಸಾರಿದ್ದ ನುಲಿಯ ಚಂದಯ್ಯ

ಕೊಟ್ಟೂರು : ಕಾಯಕದ  ಮಹತ್ವ ಸಾರಿದ್ದ ನುಲಿಯ ಚಂದಯ್ಯ

ಕೊಟ್ಟೂರು, ಆ.31- ಕಾಯಕ ಯೋಗಿ ನುಲಿಯ ಚಂದಯ್ಯ ಅವರ 916ನೇ ಜಯಂತಿಯನ್ನು ಗುರುವಾರ ಬೆಳಿಗ್ಗೆ 11 ಗಂಟೆಗೆ ಕೊಟ್ಟೂರು ತಾಲ್ಲೂಕು ಕಚೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ತಹಶೀಲ್ದಾರ್ ಅಮರೇಶ್ ಜಾಲಹಳ್ಳಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಚರಿಸಲಾಯಿತು.

ನಂತರ ಕಾಯಕ ಯೋಗಿ ನುಲಿಯ ಚಂದಯ್ಯ ಅವರ 916ನೇ ಜಯಂತಿ ಕಾರ್ಯಕ್ರಮದಲ್ಲಿ  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಿಸಲಾಯಿತು. ರಾಜ್ಯದಲ್ಲಿ ಕೊರಮ, ಕೊರಚ ಕೊರವ ಸಮುದಾಯಕ್ಕೆ ಸೇರಿದ ಲಕ್ಷಾಂತರ ಜನರು ಇದ್ದು, 12ನೇ ಶತಮಾನದ ಬಸವಾದಿ ಪ್ರಮಥರ ಸಮಕಾಲೀನ ಶಿವಶರಣ, ಕಾಯಕ ಸದ್ಭಾವಿ, ಸರ್ವಶ್ರೇಷ್ಠ ಶಿವಶರಣ ನುಲಿಯ ಚಂದಯ್ಯ ಕಾಯಕ ನಿಷ್ಠೆಯನ್ನು ಸಾರಿದ ಮಹಿಮಾ ಪುರುಷ ಎಂದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ರಾಜ್ಯ ಉಪ ಕಾರ್ಯದರ್ಶಿ ಕೆ. ಕೊಟ್ರೇಶ್ ಹಾಗೂ ಕೊಟ್ಟೂರು ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಭಜಂತ್ರಿ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ, ಬೆಳ್ಳಿ ರಥದ ಸಿದ್ದಣ್ಣ, ಪರಶುರಾಮ್, ಗಜಪುರ ಅಜ್ಜಪ್ಪ, ಸುರೇಶ್ ಕವಾಡಿ, ದ್ಯಾಮಪ್ಪ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!