ಸೂಳೆಕೆರೆ ವೀಕ್ಷಣೆ ನಡೆಸಿದ ಶಾಸಕ ಬಸವಂತಪ್ಪ

ಸೂಳೆಕೆರೆ ವೀಕ್ಷಣೆ ನಡೆಸಿದ ಶಾಸಕ ಬಸವಂತಪ್ಪ

ಚನ್ನಗಿರಿ‌, ಆ. 24- ತಾಲೂಕಿನ ಐತಿಹಾಸಿಕ ಸ್ಥಳವಾಗಿರುವ ಸೂಳೆ ಕೆರೆಯ ಸುತ್ತಮುತ್ತಲಿನ‌ ಪ್ರದೇಶ ಗಳಲ್ಲಿ‌ ಎಲ್ಲೆಂದರಲ್ಲಿ ಬ್ರಾಂದಿ, ಬೀರು  ಬಾಟಲಿ ಹಾಗೂ ಇಸ್ಪೀಟ್ ಎಲೆಗಳ ತಾಣವಾಗಿ ಮಾರ್ಪ ಟ್ಟಿದ್ದು, ಸೂಳೆಕೆರೆ ಸೌಂದರ್ಯಕ್ಕೆ‌ ಧಕ್ಕೆಯಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಇಲ್ಲಿನ ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು.

ಗುರುವಾರ ಅಧಿಕಾರಿಗಳೊಂದಿಗೆ ಜಾಕ್‌ವೆಲ್ 6 ಕ್ಕೆ ಬೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು‌, ಸೂಳೆಕೆರೆ ನೀರನ್ನು ಲಕ್ಷಾಂತರ ಜನರು ಕುಡಿಯುತ್ತಿದ್ದಾರೆ. ಜಮೀನುಗಳು ಸಹ ಸೂಳೆಕೆರೆ ನೀರನ್ನು ಅವಲಂಭಿಸಿವೆ. ಇತ್ತೀಚಿಗೆ ನಡೆದ ಚಿತ್ರದುರ್ಗದ ಕವಾಡಿಗರಹಟ್ಟಿಯ ದುರಂತಕ್ಕೆ ಸಾಕ್ಷಿಯೆಂಬಂತೆ ಇಲ್ಲಿ ಯಾವುದೇ ಅನಾಹುತಗಳು ಸಂಭವಿಸಬಾರದು. ತ್ಯಾಜ್ಯದಿಂದ ಕೂಡಿರುವ ಎಲ್ಲವನ್ನು‌ ಸ್ವಚ್ಛಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಕು.ಗ್ರಾ. ನೀರು ಇಂಜಿನಿಯರ್ ಅಶೋಕ ಕೆ., ಯಶವಂತ್ ಇತರರು ಇದ್ದರು.

error: Content is protected !!