ರಾಣೇಬೆನ್ನೂರಿನ ಮಾತಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ರಾಣೇಬೆನ್ನೂರಿನ  ಮಾತಾ  ಶಾಲೆಯಲ್ಲಿ  ವಿಶ್ವ ಪರಿಸರ ದಿನಾಚರಣೆ

ರಾಣೇಬೆನ್ನೂರು, ಜೂ. 6- ಇಲ್ಲಿನ  ಚೋಳಮರಡೇಶ್ವರ ನಗರದಲ್ಲಿರುವ ಮಾತಾ ಪಬ್ಲಿಕ್ ಶಾಲೆಯಲ್ಲಿ  ವಿಶ್ವ ಪರಿಸರ ದಿನಾಚರಣೆಯನ್ನು  ಸಸಿಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. 

ವಿದ್ಯಾರ್ಥಿಗಳನ್ನು   ಉದ್ದೇಶಿಸಿ ಶಾಲಾ ಮುಖ್ಯಸ್ಥರಾದ ಚನ್ನಬಸಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿ.ಎಸ್. ಲತಾ, ವ್ಯವಸ್ಥಾಪಕ ಸಿಬ್ಬಂದಿಗಳಾದ ಪುಷ್ಪಾ ಉಜ್ಜೇರ, ಚೈತ್ರಾ, ಆಶಾ, ನಾಗೇಂದ್ರ ಮಡಿವಾಳರ, ಪ್ರವೀಣ, ದೀಪಾ, ಗೀತಾ ಉಪಸ್ಥಿತರಿದ್ದರು.

error: Content is protected !!