ವಿಧಾನಸಭಾಧ್ಯಕ್ಷರಾಗಿ ಖಾದರ್ : ಹರಿಹರದಲ್ಲಿ ಸಂಭ್ರಮ

ವಿಧಾನಸಭಾಧ್ಯಕ್ಷರಾಗಿ ಖಾದರ್ : ಹರಿಹರದಲ್ಲಿ ಸಂಭ್ರಮ

ಹರಿಹರ, ಮೇ 26 – ವಿಧಾನಸಭಾಧ್ಯಕ್ಷರಾಗಿ ಯು.ಟಿ. ಖಾದರ್ ಅವರು ಆಯ್ಕೆಯಾದ ನಿಮಿತ್ತವಾಗಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಗಾಂಧಿ ವೃತ್ತ ಮತ್ತು ರಾಣಿ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್,  ಶಂಕರ್ ಖಟಾವ್ಕರ್, ಅಬ್ದುಲ್ ಅಲಿಂ, ರೇವಣಸಿದ್ದಪ್ಪ ಅಮರಾವತಿ, ಸಂತೋಷ ನೋಟದರ್, ಜಫ್ರುಲ್, ನಸ್ರುಲ್ಲಾ, ಉಮ್ಮರ್ ಬಾಷಾ, ವಿದ್ಯಾ ನೇತ್ರಾವತಿ, ನಾಗಮ್ಮ, ಭಾಗ್ಯಮ್ಮ, ರೋಹನ್, ಅಂಜನಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!