ದಾವಣಗೆರೆ, ಮೇ 25- ವಿವಿಧೆಡೆ ಕಳ್ಳತನ ಮಾಡಲಾ ಗಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಏಳು ಬೈಕುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸ್ಥಳೀಯ ಸರಸ್ವತಿ ನಗರದ ರಾಕೇಶ್ ಕೆ.ಎಲ್. (19) ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊ ಳಗಾದ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಸುನಿಲ್ ಕುಮಾರ್ ಎಂಬಾತ ಮೊನ್ನೆ ತನ್ನ ಯಮಹಾ ಬೈಕ್ ಕಳ್ಳತನವಾಗಿರುವುದಾಗಿ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇವರು ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿರುವುದು ತಿಳಿದು ಬಂದಿದೆ.
ಕೆಟಿಜೆ ನಗರ, ವಿದ್ಯಾನಗರ, ಮಲೇಬೆನ್ನೂರು ಪೊಲೀಸ್ ಠಾಣೆ, ಹದಡಿ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಕಳ್ಳತನ ಹಾಗೂ ಚನ್ನಗಿರಿ ಠಾಣೆಯಲ್ಲಿ 3 ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ.