ಮಲೇಬೆನ್ನೂರು ಸಮೀಪದಲ್ಲಿ ಟ್ರ್ಯಾಕ್ಟರ್‌ ಪಲ್ಟಿ

ಮಲೇಬೆನ್ನೂರು ಸಮೀಪದಲ್ಲಿ ಟ್ರ್ಯಾಕ್ಟರ್‌ ಪಲ್ಟಿ

ಮಲೇಬೆ ನ್ನೂರು, ಮೇ 25- ಹರಳಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಸಂಕ್ಲೀಪುರದಿಂದ ಕೆಂಗಲಹಳ್ಳಿಗೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದ್ದು, ವಾಹನ ಸವಾರರು ಹಿಡಿ ಶಾಪ ಹಾಕುವಂತಾಗಿದೆ.  ಗುರುವಾರ ಈ ರಸ್ತೆಯಲ್ಲಿ ಭತ್ತದ ಚೀಲ ಲೋಡ್‌ ಮಾಡಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ ರಸ್ತೆಯಲ್ಲಿನ ಗುಂಡಿಗಳಿಂದಾಗಿ ಪಲ್ಟಿಯಾಗಿದೆ. ಅದೃಷ್ಟವಶಾತ್‌ ಪ್ರಾಣ ಹಾನಿಯಾಗಿಲ್ಲ. ಆದರೆ ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದ ಸಂಕ್ಲೀಪುರ-ಕೆಂಗಲಹಳ್ಳಿ ರಸ್ತೆ ದುರಸ್ತಿಗಾಗಿ ಎರಡೂ ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.

error: Content is protected !!