ಅಕ್ಷರಸ್ಥರೇ ಹೆಚ್ಚು ಸೈಬರ್ ಕ್ರೈಮ್‌ಗಳಿಗೆ ಒಳಗಾಗುವುದು

ಅಕ್ಷರಸ್ಥರೇ ಹೆಚ್ಚು ಸೈಬರ್ ಕ್ರೈಮ್‌ಗಳಿಗೆ ಒಳಗಾಗುವುದು

ಸೈಬರ್ ಕ್ರೈಮ್ ಇನ್‌ಸ್ಪೆಕ್ಟರ್ ಬಿ. ಮಂಜುನಾಥ್

ದಾವಣಗೆರೆ, ಮೇ 25 – ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚು ಜನ ಅಂತರ್‌ ಜಾಲದ ಬಳಕೆಯನ್ನು ಮಾಡುತ್ತಿದ್ದಾರೆ. ಆದ್ದರಿಂದ ಹೆಚ್ಚು ಹೆಚ್ಚು ಸೈಬರ್ ಕ್ರೈಮ್‌ಗಳು ನಡೆಯುತ್ತಿವೆ. ಅದರಲ್ಲೂ ಅಕ್ಷರಸ್ಥರೇ ಹೆಚ್ಚು ಸೈಬರ್ ಕ್ರೈಮ್‌ಗಳಿಗೆ ಒಳಗಾಗುತ್ತಿದ್ದಾರೆ. ಆಂಡ್ರಾಯ್ಡ್ ಮೊಬೈಲ್‌ಯಿದ್ದರೆ ಸೆರಗಿನಲ್ಲಿ ಕೆಂಡ ಇದ್ದ ಹಾಗೆ ಎಂದು ಸೈಬರ್ ಕ್ರೈಮ್ ಇನ್‌ಸ್ಪೆಕ್ಟರ್ ಬಿ. ಮಂಜುನಾಥ್ ಹೇಳಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ಎನ್. ಎಸ್.ಎಸ್. ಘಟಕದ ವತಿ ಯಿಂದ ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ತಂತ್ರಜ್ಞಾನದ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಯುವಕ, ಯುವತಿಯರು ಸಕ್ರಿಯವಾಗಿ ದ್ದಾರೆ. ಅನುಪಯುಕ್ತ ಲಿಂಕ್‌ಗಳನ್ನು ಮತ್ತು ಆಪ್‌ಗಳನ್ನು ಬಳಸುವುದನ್ನು ನಿಲ್ಲಿಸಬೇಕು, ಇಲ್ಲವಾದರೆ ಸೈಬರ್ ಕ್ರೈಮ್ ನಂತಹ ಕೈತ್ಯಗಳಿಗೆ ಒಳಗಾಗುತ್ತೀರಿ ಎಂದರು. ಜೊತೆಗೆ ಸೈಬರ್ ಕ್ರೈಮ್ ಜರುಗಿದ ತಕ್ಷಣ ಮಾಡಬೇಕಾದ ಮುನ್ನೆಚ್ಚರಿಕೆಗಳನ್ನು ತಿಳಿಸಿದರು.

ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಡಾ. ಲೋಹಿತ್‌ ಹೆಚ್.ಎಂ. ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಮೊಬೈಲ್ ಬಳಕೆಯಿಂದ ಜೀವನ ಪ್ರೀತಿ ಮತ್ತು ಸಂಬಂಧಗಳ ನಡುವೆ ಅಂತರ ಉಂಟಾಗುತ್ತದೆ. ತಂದೆ -ತಾಯಿಗಳೂ ಪದವಿ ಹಂತದ ಮಕ್ಕಳನ್ನು ಜಾಗ್ರತೆಯಿಂದ ಮನೆಯಲ್ಲಿ ಗಮನಿಸುತ್ತಿರ ಬೇಕು ಎಂದು ಹೇಳಿದರು. ಎ.ವಿ.ಕೆ. ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲಾ ಸೊಪ್ಪಿನ ಅಧ್ಯಕ್ಷತೆ ವಹಿಸಿ ಮಾತನಾಡಿ ಸೈಬರ್ ಕ್ರೈಮ್‌ ಬಗ್ಗೆ ಪ್ರಸ್ತುತ ದಿನಮಾನಗಳಲ್ಲಿ ಎಚ್ಚರಿಕೆ ಇರಬೇಕಾದ ಸಂಗತಿ, ಮೊಬೈಲ್ ಬಳಕೆಯನ್ನು ಮಾಡುವಾಗ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು ಅಂತರ್ಜಾಲ ಬಳಕೆಯನ್ನು ಕಡಿಮೆ ಮಾಡಬೇಕು. ಓದಿನ ಕಡೆಗೆ ಹೆಚ್ಚು ಗಮನ ನೀಡಬೆೇಕೆಂದು ತಿಳಿಸಿದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕ ಶಿವಕುಮಾರ್ ಆರ್.ಆರ್.ಎನ್.ಎಸ್.ಎಸ್. ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಉಷಾ ಎಂ.ಆರ್. ಉಪಸ್ಥಿತರಿದ್ದರು. ಸೃಷ್ಟಿ ಎಂ.ಪಿ. ಸಹನ ಎಸ್. ನಿರೂಪಿಸಿದರು. ಸಹನ ಮತ್ತು ಸಂಗಡಿಗರು ಪ್ರಾರ್ಥನೆ ಮಾಡಿದರು. ತುಳುಜಾಲಕ್ಷ್ಮಿ ಜೆ.ಸಿ. ಸ್ವಾಗತಿಸಿದರು. ರುಚಿತ ಸಿ. ವಂದಿಸಿದರು. 

error: Content is protected !!