ಪಾರದರ್ಶಕ ಮನೆ ಹಂಚಿಕೆಗೆ ಶಾಸಕರ ತಾಕೀತು
ದಾವಣಗೆರೆ, ಫೆ. 3 – ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ತಾಲ್ಲೂಕಿಗೆ 506, ಚನ್ನಗಿರಿ ತಾಲ್ಲೂಕಿಗೆ 244 ಸೇರಿ ಕ್ಷೇತ್ರಕ್ಕೆ ಒಟ್ಟು 750 ಮನೆಗಳು ಮಂಜೂರಾಗಿವೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ತಿಳಿಸಿದ್ದಾರೆ.
ನಿರ್ಗತಿಕರು, ಬಡವರಿಗೆ ಸೂರು ಕಲ್ಪಿಸಲು ಸರ್ಕಾರ ಮತ್ತು ವಸತಿ ಸಚಿವರ ಮೇಲೆ ಒತ್ತಡ ಹಾಕಿ ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ತಾಲ್ಲೂಕಿನ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗಳಿಗೆ 2022-23ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಮತ್ತು ಬಸವ ವಸತಿ ಯೋಜನೆಯಡಿ 506, ಚನ್ನಗಿರಿ ತಾಲ್ಲೂಕಿನ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗಳಿಗೆ 244 ಸೇರಿದಂತೆ ಒಟ್ಟು 750 ಮನೆಗಳನ್ನು ಮಂಜೂರು ಮಾಡಿಸಲಾಗಿದೆ.
ದಾವಣಗೆರೆ ತಾಲ್ಲೂಕಿನ ಗ್ರಾ.ಪಂ. ಗಳಾದ ಆಲೂರು 12, ಆನಗೋಡು 31, ಅಣಜಿ 23, ಅಣಬೇರು 30, ಅತ್ತಿಗೆರೆ 18, ಬಾಡ 25, ಬಸವನಾಳು 24, ಗೋಪನಾಳು 21, ಹೆಮ್ಮನಬೇತೂರು 25, ಹೊನ್ನೂರು 20, ಹುಚ್ಚವ್ವನಹಳ್ಳಿ 23, ಐಗೂರು 5, ಕಂದಗಲ್ಲು 10, ಕಂದನಕೋವಿ 10, ಕೊಡಗನೂರು 19, ಕುರ್ಕಿ 20, ಮಳಲಕೆರೆ 20, ಮತ್ತಿ 15, ಮಾಯಕೊಂಡ 33, ನರಗನಹಳ್ಳಿ 22, ಶ್ಯಾಗಲೆ 21, ತೋಳಹುಣಿಸೆ 14, ನೇರ್ಲಿಗೆ 18, ಲೋಕಿಕೆರೆ 22, ಶ್ರೀರಾಮನಗರ 5 ಸೇರಿ ಒಟ್ಟು 506 ಮನೆ ಹಂಚಿಕೆ ಮಾಡಲಾಗಿದೆ.
ಚನ್ನಗಿರಿ ತಾಲ್ಲೂಕಿನ ಗ್ರಾ.ಪಂ. ಗಳಾದ ಬಸವಾಪಟ್ಟಣ 34, ಬೆಳಲಗೆರೆ 18, ಚಿರಡೋಣಿ 30, ದಾಗಿನಕಟ್ಟೆ 17, ಜಿ.ಕೆ. ಹಳ್ಳಿ 8, ಕಬ್ಬಳ 5, ಕಂಸಾಗರ 14, ಕಣಿವೆ ಬಿಳಚಿ 2, ಕಾರಿಗನೂರು 10, ಕತ್ತಲಗೆರೆ 12, ಕೋಟೆಹಾಳ್ 11, ನಿಲೋಗಲ್ಲು 14, ತ್ಯಾವಣಿಗೆ 26, ರುದ್ರಾಪುರ 3, ನಿವಿಲೇಹಾಳು 16, ನಲ್ಕುದುರೆ 24 ಸೇರಿ ಒಟ್ಟು 244 ಮನೆ ಹಂಚಿಕೆ ಮಾಡಲಾಗಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಮಾಹಿತಿ ನೀಡಿದ್ದಾರೆ.
ಸರ್ಕಾರ ನಿರ್ಗತಿಕರಿಗೆ, ಬಡವರಿಗೆ ಮನೆ ನೀಡಿದೆ. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಅರ್ಹ ಫಲಾನುಭವಿಗಳನ್ನು ಪಾರದರ್ಶಕವಾಗಿ ಗುರುತಿಸಿ ಮನೆ ನೀಡಬೇಕು. ಯಾವುದೇ ಕಾರಣಕ್ಕೂ ಫಲಾನುಭವಿಗಳ ಬಳಿ ಮನೆ ನೀಡುವುದಕ್ಕೆ ಹಣ ವಸೂಲಿ ಮಾಡಬಾರದು. ಒಂದು ವೇಳೆ ಹಣ ವಸೂಲಿ ಮಾಡಿದರೆ ಫಲಾನುಭವಿಗಳು ನೇರವಾಗಿ ಶಾಸಕರನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿದ್ದಾರೆ.