ಜಗದೀಶ್ ಶೆಟ್ಟರ್, ಜಿ.ಎಂ ಸಿದ್ದೇಶ್ವರ ಅವರಿಂದ ಮನ್ ಕಿ ಬಾತ್ ವೀಕ್ಷಣೆ
ದಾವಣಗೆರೆ, ಡಿ. 29 – ಕಾರ್ಯಕ್ರಮವೊಂದ ರಲ್ಲಿ ಭಾಗವಹಿಸಲೆಂದು ಇಂದು ನಗರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ, ಸಂಸತ್ ಸದಸ್ಯ ಜಗದೀಶ್ ಶೆಟ್ಟರ್, ಶಾಸಕ ಮಹೇಶ್ ಟೆಂಗಿನಕಾಯಿ, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಅವರುಗಳು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ಮನೆಯಲ್ಲಿ ಮನ್ ಕಿ ಬಾತ್ ಕಾರ್ಯ ಕ್ರಮ ವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಮಾತನಾಡಿ, ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದಿನ ನಿತ್ಯದ ಆಡಳಿತ ಸಮಸ್ಯೆಗಳ ಕುರಿತು ದೇಶದ ನಾಗರಿಕರೊಂದಿಗೆ ಸಂವಾದ ನಡೆಸುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉದ್ದೇಶವಾಗಿದೆ. ಈ ಕಾರ್ಯಕ್ರಮವನ್ನು ದೇಶದ ಕೋಟಿ ಕೋಟಿ ಜನರು ವಿಕ್ಷೀಸುತ್ತಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ಉದ್ದೇಶ ಮತ್ತು ನರೇಂದ್ರ ಮೋದಿಯವರ ಆಲೋಚನೆಗಳನ್ನು ಜನ ಸಾಮಾನ್ಯರು ಪರಸ್ಪರ ಚರ್ಚಿಸುವ ಮೂಲಕ ದೇಶದ ಜನ ಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಚುನಾವಣಾಧಿಕಾರಿ ತುಮಕೂರು ಭೈರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬಾಳ್, ಅನಿಲಕುಮಾರನಾಯ್ಕ, ಮಹಾನಗರ ಪಾಲಿಕೆ ಸದಸ್ಯ ಆರ್. ಶಿವಾನಂದ, ಮುಖಂಡ ಹೆಚ್.ಎನ್. ಶಿವಕುಮಾರ, ಶಿವರಾಜ ಪಾಟೀಲ್, ಅತಿಥ್ ಅಂಬರಕರ್, ಶಾಮನೂರು ಹರೀಶ್ ಮುಂತಾದವರು ಉಪಸ್ಥಿತರಿದ್ದರು.