ಶೀಘ್ರ ಹದಡಿ ರಸ್ತೆ ದುರಸ್ತಿಗೆ ಆಗ್ರಹ

ಶೀಘ್ರ ಹದಡಿ ರಸ್ತೆ ದುರಸ್ತಿಗೆ ಆಗ್ರಹ

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

ದಾವಣಗೆರೆ, ಜು. 4- ನಗರದ ಜಯದೇವ ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ಹಾದು ಹೋಗುವ ಹದಡಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ಥಿ ಪಡಿಸುವಂತೆ ಆಗ್ರಹಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬುಧವಾರ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹದಡಿ ರಸ್ತೆಯಲ್ಲಿ ಅತಿ ಹೆಚ್ಚು ವಾಹನಗಳ ಸಂಚರಿಸುತ್ತಿವೆ. ವಾಹನ ಚಾಲಕರು ಹಾಗೂ ಪಾದಚಾರಿಗಳು ನರಕ ಯಾತೆ ಅನುಭವಿಸು ವಂತಾಗಿದೆ. ನಿತ್ಯವೂ ಜೀವಭಯದಿಂದಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ. ಯಲ್ಲಪ್ಪ ಆರೋಪಿಸಿದರು.

ಕಳೆದ ಎರಡು ತಿಂಗಳಿನಿಂದ ಗುಂಡಿಗಳಾಗಿ ರಸ್ತೆ ಪೂರ್ಣ ಹದಗೆಟ್ಟಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.  ನಿತ್ಯವೂ ಈ ರಸ್ತೆಯಲ್ಲಿ ಹತ್ತಾರು ಆಂಬುಲೆನ್ಸ್‌ಗಳು ಸಂಚರಿಸುತ್ತವೆ. ಜೀವನ್ಮರಣದ ಹೋರಾಟದಲ್ಲಿರುವ ರೋಗಿಗಳ ಗತಿ ಏನಾಗುತ್ತದೆ ಎಂಬುದನ್ನು ಅಧಿಕಾರಿಗಳು ಚಿಂತಿಸಬೇಕು. ಪ್ರಾಣ ಬಲಿಯಾಗುವ ವರೆಗೆ ಕಾಯಬೇಕು? ಎಂದು ಯಲ್ಲಪ್ಪ ಆಕ್ರೋಶ ಹೊರ ಹಾಕಿದರು.

ತಕ್ಷಣವೇ ರಸ್ತೆ ದುರಸ್ಥಿ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ವೇದಿಕೆಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಬಾಬುರಾವ್, ಪ್ರಧಾನ ಕಾರ್ಯದರ್ಶಿ ಅಜಮ್ ರಜ್ವನಿ, ನಗರಾಧ್ಯಕ್ಷ ಸಿದ್ದೇಶ್ ಎಸ್., ನಾಗರಾಜ ಗೌಡ, ಜಿ.ಮಹಾಲಿಂಗಪ್ಪ, ದುಗ್ಗೇಶ್, ದಯಾನಂದ್, ಅಜ್ಮದ್ ಅಲಿ, ಮೆಹಬೂಬ್, ಸಂತೋಷ್ ದೊಡ್ಮನಿ, ರವಿ ಎಂ., ಗಿರೀಶ್, ಗದಿಗೆಪಪ್ಪ, ಗಿರೀಧರ, ರಾಮಣ್ಣ ತೆಲಗಿ, ಶಾರೂಕ್ ಹಾಷ್ಮಿ, ಅಣ್ಣೇಶ್, ಪೃತ್ವಿ, ರಮೇಶ್, ಕಿರಣ್, ಅವಿನಾಶ್, ರವಿ, ಬಸವರಾಜ್, ಆನಂದ್, ಯತಿರಾಜ್, ನವೀನ್, ಪ್ರಶಾಂತ್ ಇತರರಿದ್ದರು.

error: Content is protected !!