ಜೈನ್‌ ಕ್ಯಾಂಪಸ್‌ನಲ್ಲಿ ಎತ್ನಿಕ್ ಡೇ ಸಂಭ್ರಮ

ಜೈನ್‌ ಕ್ಯಾಂಪಸ್‌ನಲ್ಲಿ ಎತ್ನಿಕ್ ಡೇ ಸಂಭ್ರಮ

ದಾವಣಗೆರೆ, ಮೇ 22- ಓದು, ಬರಹ ಮತ್ತು ಪಠ್ಯದಲ್ಲಿ ತೊಡಗಿದ್ದ ಜೈನ್‌ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಗಳು ಬುಧವಾರ ಎತ್ನಿಕ್ ಡೇ ಆಚರಿಸಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಮಿಂಚಿದರು.

ನಿತ್ಯವೂ ಸಮವಸ್ತ್ರ ಧರಿಸಿ ಬರುತ್ತಿದ್ದ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಕಾಲೇಜಿಗೆ ಬಂದಿದ್ದು ಎಲ್ಲರ ಗಮನ ಸೆಳೆಯಿತು.

ವಿವಿಧ ವಿಭಾಗಗಳ ಹಲವು ವಿದ್ಯಾ ರ್ಥಿಗಳು ಹಳ್ಳಿ ಸೊಗಡು, ಸಂಕ್ರಾಂತಿ ಹಬ್ಬ, ಮದುವೆ ಸಮಾರಂಭ, ದಸರಾ ಹಬ್ಬ, ಗಣೇಶ ಉತ್ಸವ ಮತ್ತು ಕೃಷ್ಣ ಜನ್ಮಾಷ್ಟಮಿ ಕಲಾ ಪ್ರಕಾರಗಳನ್ನು ಪ್ರದ ರ್ಶಿಸಿದರು ಮತ್ತು ವಿವಿಧ ವೇಷಭೂಷ ಣದೊಂದಿಗೆ ಎಲ್ಲರನ್ನು ಆಕರ್ಷಿಸಿದರು.

ಹಿರಿಯ ದೃಶ್ಯ ಕಲಾವಿದ ಎ. ಮಹಾಲಿಂಗಪ್ಪ ಮತ್ತು ಡಾ. ಶೃತಿ ರಾಜ್‌ ಮುಖ್ಯ ಅತಿಥಿ ಹಾಗೂ ತೀರ್ಪುಗಾರರಾಗಿ ಸ್ಪರ್ಧೆಯನ್ನು ಕಣ್ತುಂಬಿಕೊಂಡರು.

ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ. ಗಣೇಶ್, ಸಲಹೆಗಾರ ಡಾ. ಮಂಜಪ್ಪ ಸಾರಥಿ, ಸಂಚಾಲಕ ಡಾ.ಎಸ್. ಮೌನೇಶ್‌ ಅಚಾರಿ ಇದ್ದರು.

error: Content is protected !!