ಹರಿಹರ, ನ.10- ನಗರದ ಮುಸ್ಲಿಂ ಸಮುದಾಯದ ಪ್ರತಿಷ್ಠಿತ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಪದಾಧಿಕಾರಿಗಳ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಸೈಯದ್ ಎಜಾಜ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಫಾರೂಖ್ ಎಂ. (ಎಂಎಂಡಿ), ಕಾರ್ಯದರ್ಶಿಯಾಗಿ ಸೈಯದ್ ಆಸಿಫ್ ಅಹ್ಮದ್ ಜುನೈದಿ, ಖಜಾಂಚಿಯಾಗಿ ಫಯಾಜ್ ಅಹ್ಮದ್ ಅವಿರೋಧವಾಗಿ ಆಯ್ಕೆಯಾದರು.
ಒಡಂಬಡಿಕೆ: ಸಂಸ್ಥೆಯ 21 ಸ್ಥಾನಗಳಿಗೆ ಅ.28 ರಂದು ನಡೆದ ಚುನಾವಣೆಯಲ್ಲಿ ಯಾವುದೇ ಗುಂಪಿಗೆ ಬಹುಮತ ಲಭಿಸಿರಲಿಲ್ಲ. ಹೀಗಾಗಿ ಬಿಸ್ಮಿಲ್ಲಾ ಮತ್ತು ಮದೀನಾ ಗುಂಪುಗಳ ನಡುವೆ ಒಪ್ಪಂದವಾಗಿ ಆಡಳಿತದ ಚುಕ್ಕಾಣಿ ಹಿಡಿಯಲಾಗಿದೆ.
ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆ ನಿರ್ದೇಶಕರಾದ ನಗರಸಭಾ ಸದಸ್ಯ ಆರ್.ಸಿ.ಜಾವೀದ್, ಫಕೃಲ್ಲಾ ಖಾನ್ ಎಚ್., ಸೈಯದ್ ಅಶ್ಫಾಖ್, ನಾಸೀರ್ ಸಾಬ್ ಪೈಲ್ವಾನ್, ಮೊಹ್ಮದ್ ಸಿಗ್ಬತ್ಉಲ್ಲಾ ಬಿ., ಸೈಯದ್ ಸನಾಉಲ್ಲಾ ಎಂ.ಆರ್., ನಗರಸಭಾ ಸದಸ್ಯ ಮುಜಾಮ್ಮಿಲ್ ಎಂ.ಆರ್. (ಬಿಲ್ಲು), ರೋಷನ್ ಜಮೀರ್ ಟಿ., ನೂರ್ ಉಲ್ಲಾ ಎಚ್., ಸೈಯದ್ ರಹಮಾನ್ (ಕೇಟ್ಲಿ), ಸೈಯದ್ ಬಷೀರ್ ಬಿ., ಸಾದಿಕ್ ಉಲ್ಲಾ ಎಸ್.ಎಂ., ಮೊಹ್ಮದ್ ಅಲಿ (ಎನಪೋಯ), ಅಫ್ರೋಜ್ ಖಾನ್ (ಯುತ್), ಹಾಜಿ ಅಲಿ ಖಾನ್, ಸರ್ಫರಾಜ್ ಅಹ್ಮದ್ ಕೆ., ಗೌಸ್ ಪೀರ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಶಾಮೀರ್ ಆಲಂ ಖಾನ್, ನಗರಸಭಾ ಸದಸ್ಯ ಎಂ.ಎಸ್.ಬಾಬುಲಾಲ್, ಬಾಂಬೆ ರಹಮಾನ್ ಸಾಬ್, ಬಿ.ಮಗ್ದುಮ್, ಡಾ.ನಾಸಿರುದ್ದೀನ್, ಸೈಯದ್ ಅನು ತುರಾಬ್ ಇದ್ದರು. ವಕ್ಫ್ ಜಿಲ್ಲಾಧಿಕಾರಿ ಸೈಯದ್ ಮೌಜಮ್ ಪಾಷಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಆಯ್ಕೆಯಾದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಮುಸ್ಲಿಂ ಸಮುದಾಯದ ಧರ್ಮ ಗುರುಗಳಾದ ಶಂಶುದ್ದೀನ್ ಸಾಬ್ ಬರಕಾತಿ ಶುಭ ಹಾರೈಸಿದ್ದಾರೆ.