ಎಸ್‌.ಎಂ. ಕೃಷ್ಣ ನಗರದ ತೆರವು ಕಾರ್ಯ ನಿಲ್ಲಿಸುವಂತೆ ನಿವಾಸಿಗಳ ಮನವಿ

ಎಸ್‌.ಎಂ. ಕೃಷ್ಣ ನಗರದ ತೆರವು ಕಾರ್ಯ ನಿಲ್ಲಿಸುವಂತೆ ನಿವಾಸಿಗಳ ಮನವಿ

ದಾವಣಗೆರೆ, ಮಾ.11- ಎಸ್‌.ಎಂ. ಕೃಷ್ಣ ನಗರದಲ್ಲಿನ ಮನೆಗಳನ್ನು ತೆರವು ಮಾಡಲು ಸೂಚಿಸಿದ ಹೈಕೋರ್ಟ್‌ ಆದೇಶವನ್ನು ವಿರೋಧಿಸಿ, ತೆರವು ಕಾರ್ಯ ತಡೆಹಿಡಿಯುವಂತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಎಸ್‌.ಎಂ. ಕೃಷ್ಣ ನಗರ ನಿವಾಸಿಗಳು, 2002ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಕೆ. ಶಿವರಾಂ ಅವರು ಎಸ್‌.ಎಂ. ಕೃಷ್ಣ ನಗರದ ಸರ್ವೇ ನಂ. 145/1ಪಿಗೆ ಸೇರಿದ 3 ಎಕರೆ ಜಾಗವನ್ನು ನಿರಾಶ್ರಿತರಿಗೆ ಸರ್ಕಾರದಿಂದ  ಆಶ್ರಯ ಮನೆಗಳನ್ನು ನಿರ್ಮಾಣ ಮಾಡಿ ಕೊಟ್ಟಿರುತ್ತಾರೆ.

ಆ ಜಾಗದಲ್ಲಿ ಮನೆ ಮಾಡಿಕೊಟ್ಟ ನಂತರ 2002ರಿಂದ 2025ರ ವರೆಗೂ 23 ವರ್ಷಗಳಿಂದ ಕಂದಾಯ ವನ್ನು ಪಾಲಿಕೆಗೆ ಕಟ್ಟುತ್ತಾ ಬಂದಿದ್ದೇವೆ. ಆದರೀಗ ಪತ್ರಿಕೆಗಳಲ್ಲಿ ಈ ಜಾಗ ದಲ್ಲಿನ ಮನೆಗಳನ್ನು ತೆರವುಗೊಳಿಸು ವಂತೆ ಹೈಕೋರ್ಟ್‌ ಆದೇಶ ನೀಡಿರುವುದು ಇಲ್ಲಿನ ನಿವಾಸಿಗಳಿಗೆ ಆತಂಕ ತಂದಿದೆ.

ಈ ಭಾಗದಲ್ಲಿ ಹೆಚ್ಚಾಗಿ ಕಡು ಬಡವರು, ವಿಕಲ ಚೇತನರು ಹಾಗೂ ಕೂಲಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಆದರೆ ಯಾವಾಗ ಏನಾಗುತ್ತದೆಯೋ ಎಂಬ ಭಯ ನಾಗರಿಕರಲ್ಲಿ ಕಾಡುತ್ತಿದೆ. ತೆರವು ಕಾರ್ಯ ತಡೆಯಬೇಕೆಂದು ಮನವಿ ಮಾಡಿದ್ದಾರೆ.

ಈ ವೇಳೆ ಅಲ್ಲಿನ ನಿವಾಸಿಗಳಾದ ಮಲ್ಲಿಕಾರ್ಜುನಪ್ಪ, ಚನ್ನಕೇಶವ, ಬಿ.ಎಂ.ಜಿ. ವೀರೇಶ್‌, ಕುಮಾರ್‌, ಮಹೇಶ್‌, ಸಾಹೇಬ್‌ಗೌಡ್ರು, ದಾನಾಚಾರಿ, ಅಣ್ಣಪ್ಪ, ಗೌರಮ್ಮ, ಗೀತಾ, ರೂಪಾ ಇತರರು ಇದ್ದರು.

error: Content is protected !!