ಬೈಕ್‌ ಕಳ್ಳನ ಬಂಧನ : 6 ಆರ್ಎಕ್ಸ್‌ ಬೈಕ್‌ ವಶ

ಬೈಕ್‌ ಕಳ್ಳನ ಬಂಧನ : 6 ಆರ್ಎಕ್ಸ್‌ ಬೈಕ್‌ ವಶ

ದಾವಣಗೆರೆ, ಮಾ.9- ಬೈಕ್‌ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸಿದ ಪೊಲೀಸರು, ಆತನಿಂದ 4.80 ಲಕ್ಷ ರೂ ಮೌಲ್ಯದ ಒಟ್ಟು 6 ಆರ್‌ಎಕ್ಸ್‌ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿದ್ಯಾನಗರದ ನಿವಾಸಿ ಡಿ.ಕೆ. ಕಿಶೋರ್‌ ಕುಮಾರ್‌ (22) ಬಂಧಿತ ಆರೋಪಿಯಾಗಿದ್ದಾನೆ. ಜಾಫರ್‌ ಸಾಧಿಕ್‌ ಎಂಬುವವರು ತಮ್ಮ ಯಮಹಾ ಆರ್‌ಎಕ್ಸ್‌ ಬೈಕನ್ನು ನಗರದ ಲಾರಿ ಆಫೀಸ್‌ ಮುಂದೆ ಕಳೆದುಕೊಂಡಿರುವುದಾಗಿ ಆಜಾದ್‌ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತಂತೆ ತನಿಖೆ ನಡೆಸಿದಾಗ ಆರೋಪಿ ಪತ್ತೆಯಾಗಿದ್ದು, ಈತನು ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ನಗರದ ಬಡವಾಣೆ ಪೊಲೀಸ್ ಠಾಣೆ, ವಿದ್ಯಾನಗರ ಪೊಲೀಸ್ ಠಾಣೆ, ಕೆಟಿಜೆ ನಗರ ಪೊಲೀಸ್ ಠಾಣೆ ಮತ್ತು ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾದ ಒಟ್ಟು 6 ಬೈಕುಗಳನ್ನು ಆರಕ್ಷಕರು ಜಪ್ತಿ ಮಾಡಿದ್ದಾರೆ.

error: Content is protected !!