ಆದರ್ಶ ಜೀವನ ಸಾಗಿಸಿದ ಸೋಮಶೇಖರ ಗೌಡ್ರು

ಆದರ್ಶ ಜೀವನ ಸಾಗಿಸಿದ ಸೋಮಶೇಖರ ಗೌಡ್ರು

ಶಿವಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ

ದಾವಣಗೆರೆ, ಮಾ.8- ಮನುಷ್ಯನ ಜೀವನದಲ್ಲಿ ಸುಖ ಹಾಗೂ ಕಷ್ಟದ ದಿನಗಳೆರಡೂ ಬರುತ್ತವೆ. ಇವುಗಳನ್ನು ಸಮರ್ಥ ವಾಗಿ ನಿಭಾಯಿಸಿ ಆದರ್ಶ ಜೀವನ ಸಾಗಿಸಿದವರು ಮಾಗನೂರು ಸೋಮ ಶೇಖರ ಗೌಡರು ಎಂಬುದಾಗಿ  ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.

ಶಿವಗೋಷ್ಠಿ ಸಮಿತಿ ಹಾಗೂ ಸಾದರ ನೌಕರರ ಬಳಗದಿಂದ ತರಳಬಾಳು ಬಡಾವಣೆಯ ಲ್ಲಿನ ಶ್ರೀ ಶಿವಕಮಾರ ಸ್ವಾಮೀಜಿ ಮಹಾಮಂ ಟಪದಲ್ಲಿ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಶಿವ ಗೋಷ್ಠಿ-316 ಹಾಗೂ ಸ್ಮರಣೆ-91 ಕಾರ್ಯಕ್ರಮದಲ್ಲಿ ಲಿಂ.ಶರಣ ಮಾಗ ನೂರು ಸೋಮಶೇಖರ ಗೌಡ್ರು ಕುರಿತು ಅವರು ಮಾತನಾಡಿದರು.

ಶಿಸ್ತು ಬದ್ಧ ಜೀವನ, ಗಾಂಧೀವಾದಿ, ಶರಣರ ತತ್ವಗಳನ್ನು ಪಾಲಿಸುತ್ತಿದ್ದ ಮಾಗನೂರು ಬಸಪ್ಪ ನವರ ಪುತ್ರರಾಗಿದ್ದ ಸೋಮಶೇಖರ ಗೌಡರು, ತಂದೆಯಂತೆಯೇ ಶಿಸ್ತಿನ ಜೀವನ ಮೈಗೂಡಿಸಿಕೊಂಡಿದ್ದರು. ಲಕ್ಷಾಂತರ ರೂಪಾಯಿ ವ್ಯವಹಾರದ ನಡುವೆಯೂ ಅವರನ್ನು ಭೇಟಿ ಮಾಡುವ ಬಂಧುಗಳನ್ನು ಆತ್ಮೀಯ ವಾಗಿ ಮಾತನಾಡಿಸುತ್ತಿದ್ದರು ಎಂದು ಸ್ಮರಿಸಿದರು.

ಇಂಟರ್ ಮೀಡಿಯಟ್‌ವರೆಗೆ ಓದಿದ್ದ ಸೋಮಶೇಖರ ಗೌಡ್ರು ಮೂರ್ನಾಲ್ಕು ಭಾಷೆ ಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ವ್ಯವಹಾರಿಕ ಜಾಣ್ಮೆ ಅವರಲ್ಲಿತ್ತು. ಮಂಡಿಪೇಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಅವರು, ಅಂದಿನ ಕಾಲದಲ್ಲಿಯೇ ಹೊರ ರಾಜ್ಯಗಳಿಂದ ಧಾನ್ಯಗಳನ್ನು ಖರೀದಿಸುತ್ತಾ, ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದರು.

30 ವರ್ಷಗಳ ಹಿಂದೆ ಪ್ರೊ.ಬಿ.ಕೆ. ಸಿದ್ದಪ್ಪನವರ ನೇತೃತ್ವದಲ್ಲಿ `ಶಿವಗೋಷ್ಠಿ ಸಮಿತಿ ‘ ರಚಿಸಿದಾಗ, ಮಣ್ಣಿನ ದಿಬ್ಬದ ಮೇಲೆ ಶಿವಗೋಷ್ಠಿ ನಡೆಸಲಾಗುತ್ತಿತ್ತು. ಸೋಮಶೇಖರ ಗೌಡ್ರು ಸಮಿತಿಯ ಅಧ್ಯಕ್ಷರಾಗಿದ್ದ ಕಾಲದಲ್ಲಿ ಸಾಕಷ್ಟು ಬೆಳವಣಿಗೆ ಕಾಣಲಾಯಿತು. ಶಿವಕುಮಾರ ಮಂಟಪ ನಿರ್ಮಿಸಿ, ಮರುಳಸಿದ್ದರ ವಿಗ್ರಹ ಪ್ರತಿಷ್ಠಾಪನಾ ಕಾರ್ಯದಲ್ಲಿ ಸೋಮಶೇಖರ ಗೌಡ್ರು ಶ್ರಮ ಹೆಚ್ಚಾಗಿತ್ತು ಎಂದು ಹೇಳಿದರು.

ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ ಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಸ್ತ್ರೀ ಸಮಾನತೆ ಮತ್ತು ವಚನಕಾರರು ಕುರಿತು ಹರಿಹರದ ಶಿಕ್ಷಕಿ ಮಮತಾ ಎಂ.ಟಿ. ಉಪನ್ಯಾಸ ನೀಡಿದರು.

ಇದೇ ವೇಳೆ ಹಿಮೋಫಿಲಿಯಾ ಸೊಸೈಟಿ ಮುಖ್ಯಸ್ಥರಾದ ಡಾ.ಸುರೇಶ್ ಹನಗವಾಡಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ.ಎಂ.ಬಿ. ಬಸವನಗೌಡ ಇವರು ಗಳನ್ನು ಅಭಿನಂದಿಸಲಾಯಿತು. 

ಸಹ ಶಿಕ್ಷಕಿ ರೇಖಾ ಕೆ.ಆರ್. ಸ್ವಾಗತಿಸಿದರು. ದೀಪಕ್ ಎನ್. ವಂದಿಸಿದರು. ಕನಕ ಅಹಲ್ಯ ಸಮಾಜದವರು ವಚನ ಗಾಯನ ನಡೆಸಿಕೊಟ್ಟರು.

error: Content is protected !!