ಹೊನ್ನಾಳಿ, ಮಾ.10- ಹಿರೇಕಲ್ಮಠದ ಅನ್ನದಾನಯ್ಯ ಮತ್ತು ನಾಗರತ್ನ ದಂಪತಿ ಪುತ್ರ ರೇಣುಕಾ ಪ್ರಸಾದ್ ಅವರಿಗೆ ಅಮೇರಿಕನ್ ಮ್ಯಾನೇ ಜ್ಮೆಂಟ್ ಯುನಿವರ್ಸಿಟಿ ಪಿಹೆಚ್ಡಿ ಪದವಿ ನೀಡಿದೆ.
ಡಾ. ಮೈಕೆಲ್ ಅವರ ಮಾರ್ಗದರ್ಶನದಲ್ಲಿ `ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ನಲ್ಲಿ ನಾಯಕತ್ವ-ತಂತ್ರಗಳು, ಸವಾಲುಗಳು ಮತ್ತು ಪರಿಣಾಮಗಳು ಎಂಬ ಪ್ರಬಂಧವನ್ನು ಮಂಡಿಸಿದ್ದರು.
ಅಮೆರಿಕಾದಲ್ಲಿ ಫೆ.14ರಂದು ನಡೆದ ಗ್ಲೋಬಲ್ ಇಂಟಿಗ್ರೇಟೆಡ್ ಡಾಕ್ಟರಲ್ ಘಟಿಕೋತ್ಸವದಲ್ಲಿ ಪಿಹೆಚ್ಡಿ ಪದವಿ ಸ್ವೀಕರಿಸಿದ್ದಾರೆ.