ರಾಪಿಡೋ ಬೈಕ್ ನಿಷೇಧಕ್ಕೆ ಆಗ್ರಹ

ದಾವಣಗೆರೆ, ಫೆ.17 – ನಗರದಲ್ಲಿ ಅನಧಿತವಾಗಿ ಕಾಲಿಟ್ಟಿರುವ ರಾಪಿಡೋ ಬೈಕ್ ಟ್ಯಾಕ್ಸಿಯನ್ನು ಕೂಡಲೇ ನಿಷೇಧಿ ಸಬೇಕು. ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಚಾಲಕರ ಒಕ್ಕೂ ಟದ ಜಿಲ್ಲಾಧ್ಯಕ್ಷ ಪಿ.ಬಿ. ಅಂಜು ಕುಮಾರ್ ಒತ್ತಾಯಿಸಿದ್ದಾರೆ.

ಯಾವುದೇ ಅಧಿಕೃತ ಲೈಸನ್ಸ್ ಇಲ್ಲದ ಈ ಕಂಪನಿ ಬೆಂಗಳೂರಿನಲ್ಲಿ ಲಕ್ಷಾಂತರ ಆಟೋ ಮತ್ತು ಕಾರು ಚಾಲಕರ ಬದುಕನ್ನು ಹಾಳು ಮಾಡಿದೆ. ಈಗ ಕಳೆದ ಒಂದು ವಾರದಿಂದ ನಗರದಲ್ಲೂ ಕಾರ್ಯಾರಂಭ ಮಾಡಿದೆ. ಜಿಲ್ಲಾಡಳಿತ ಈ ಕಂಪನಿ ಮೇಲೆ ಕ್ರಮ ಕೈಗೊಳ್ಳ ದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು.

ಆಟೋ ಹಾಗೂ ಕ್ಯಾಬ್‌ಗಾಗಿ ಸರ್ಕಾರದಿಂದಲೇ ಒಂದು ಆಪ್ ಮಾಡುವುದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಘೋಷಿಸಿದ್ದರು. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ಕೂಡಲೇ ಆಪ್ ರಚಿಸಿದರೆ ಸರ್ಕಾರಕ್ಕೂ ಆರ್ಥಿಕ ಸಂಪನ್ಮೂಲ ದೊರೆಯುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯ ಸಂಚಾಲಕ ಡಿ.ಆರ್. ಅರವಿಂದಾಕ್ಷ, ಬಸವರಾಜ್, ಪ್ರಶಾಂತ್, ಗುರುರಾಜ್, ಬಸವರಾಜ್ ಎಂ, ಮಂಜುನಾಥ್, ಗಂಗಾಧರ್ ಬಿ.ಎಸ್., ಮನು, ಕಿರಣ್ ಕುಮಾರ್, ಸಿದ್ದೇಶ್ ಇತರರಿದ್ದರು.

error: Content is protected !!