ನಗರದಲ್ಲಿ ಇಂದು ವೀರಭದ್ರೇಶ್ವರ ಸ್ವಾಮಿ ಗುಗ್ಗಳ

ನಗರದಲ್ಲಿ ಇಂದು ವೀರಭದ್ರೇಶ್ವರ ಸ್ವಾಮಿ ಗುಗ್ಗಳ

ಹುಬ್ಬಳ್ಳಿ ಚೌಡಪ್ಪನ ಗಲ್ಲಿಯಲ್ಲಿ ರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಶಿಲಾಮೂರ್ತಿಯ 25ನೇ ವಾರ್ಷಿಕ ಮಹೋತ್ಸವ, ಬಲಮುರಿ ಶ್ರೀಗಣೇಶ ಶಿಲಾಮೂರ್ತಿಯ 7ನೇ ವಾರ್ಷಿಕ ಮಹೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿ ಉಪಾಸಕರಾದ ಲಿಂ. ಗುರುಬಾಯಮ್ಮನವರ 10ನೇ ಪುಣ್ಯಸ್ಮರಣೋತ್ಸವ ಧಾರ್ಮಿಕ ಸಮಾರಂಭದ ಅಂಗವಾಗಿ ಲೋಕ ಕಲ್ಯಾಣಾರ್ಥ ಹಾಗೂ ವಿಶ್ವಶಾಂತಿಗಾಗಿ  ಇಂದು  ಗುಗ್ಗಳ ನಡೆಯಲಿದೆ.

ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಸಿಂಧಗಿ ಮಠದ ಶ್ರೀ ಸಿಂಧಗಿ ಶಾಂತವೀರೇಶ್ವರ ಪಟ್ಟಾಧ್ಯಕ್ಷರು ಸಾನ್ನಿಧ್ಯ ವಹಿಸಲಿದ್ದಾರೆ. 

ಮೇಯರ್ ಕೆ. ಚಮನ್ ಸಾಬ್, ಚಂದ್ರಶೇಖರ ಶಾಸ್ತ್ರಿಗಳು, ಲಿಂಗರಾಜ್ ಹೊಳಿಬಸಯ್ಯ ಹಿರೇಮಠ್, ವೀರಪ್ಪ ಬಿಜ್ಜೂರು, ಲಕ್ಷ್ಮೀ ರವಿ ಬಿಜ್ಜೂರು, ಶಿವನಗೌಡರ ಜ್ಯೋತಿ ಚನ್ನವೀರ ಗೌಡ್ರು, ಪುಷ್ಪ ಪ್ರಕಾಶ್, ಶಂಕರ ವಜ್ಜಲ, ಮುತ್ತಣ್ಣ, ಕುಸುಮ ಸಂತೋಷ್ ಮುದೇಗೌಡ್ರು, ಯಲ್ಲಪ್ಪ ರತ್ನಮ್ಮ, ಆದಪ್ಪ ಬಿಮ್ ಬಾಯಿ, ದೂಡಾ ಸದಸ್ಯೆ ವಾಣಿ ಬಕ್ಕೇಶ್‌, ಸಂತೋಷ್ ಹೊಸ ಅಂಗಡಿ, ಎಸ್.ಎಸ್.ಬಿರಾದಾರ, ಶಾರದಾ ಶಿವಕುಮಾರ್, ಸಂತೋಷ್ ಕುಮಾರ್, ಜ್ಯೋತಿ ಕೊಟ್ರೇಶ್, ಕರೂರು ಷಣ್ಮುಖ, ಆನಂದ್ ಕುಮಾರ್, ಪ್ರೇಮ ರೇವಣ್ಣ, ಅಮರೇಶ್, ಜ್ಯೋತಿ ಕಾಂತರಾಜ್, ಮಲ್ಲಪ್ಪ ಬೇವಿನಹಳ್ಳಿ ಭಾಗವಹಿಸಲಿದ್ದಾರೆ.

error: Content is protected !!