ದಾವಣಗೆರೆ, ಫೆ. 11 – ಬಿಎನ್ಐ ಪೃಥ್ವಿ ಚಾಪ್ಟರ್ ದಾವಣಗೆರೆ ಇದರ ಸಭೆಯು ಬಾಪುಜಿ ಬಿ-ಸ್ಕೂಲ್ಸ್ ಸಹಯೋಗದಲ್ಲಿ ಬಾಪೂಜಿ ಎಂಬಿಎ ಸಭಾಂಗಣದಲ್ಲಿ ಇಂದು ನಡೆಯಿತು. ವಿನಾಯಕ ಬಿ. ಮಲ್ಲನಗೌಡರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾಗಿ ಜಿ.ಕೆ. ರಘು ಹಾಗೂ ಕಾರ್ಯದರ್ಶಿ-ಖಜಾಂಚಿಯಾಗಿ ಬಿ. ಕಿರಣ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೇರ ನೆಟ್ವರ್ಕಿಂಗ್ ಮೂಲಕ ಯಶಸ್ವಿ ಬಿಎನ್ಐ ಸದಸ್ಯರ ಯಶೋಗಾಥೆಗಳನ್ನು ಹಂಚಿಕೊಳ್ಳಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಾಪೂಜಿ ಬಿ-ಸ್ಕೂಲ್ಸ್ ನಿರ್ದೇಶಕ ಡಾ. ಎಚ್.ವಿ. ಸ್ವಾಮಿ ತ್ರಿಭುವಾನಂದ ಮಾತನಾಡಿ, ಗುಡ್ ಮಾರ್ನಿಂಗ್ ಅನ್ನು ಮರುಮರು ಹೇಳುವುದರಿಂದ ಪರಸ್ಪರ ಸಕಾರಾತ್ಮಕ ಶಕ್ತಿ ಉಂಟಾಗುತ್ತದೆ ಎಂಬುದರ ಬಗ್ಗೆ ಹಾಗೂ ಉದ್ಯಮಿಗಳಾಗುವ ಮಹತ್ವವನ್ನು ವಿವರಿಸಿದರು.
ಬಿಎನ್ಐ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಹೆಗ್ಡೆ ಅವರು ಬಿಎನ್ಐ ಯ 40 ವರ್ಷಗಳ ಪ್ರಯಾಣದ ಬಗ್ಗೆ ವಿವರಿಸಿದರು.