ಈಶ್ವರೀಯ ವಿಶ್ವವಿದ್ಯಾಲಯದಿಂದ ಸಾಮೂಹಿಕ ಧ್ಯಾನ ಉಪನ್ಯಾಸ ಕಾರ್ಯಕ್ರಮವು ಹಿರೇಕಲ್ಮಠದ ಮುಂಭಾಗದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಪ್ರತಿದಿನ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಾಕುಮಾರಿ ಜ್ಯೋತಿ ತಿಳಿಸಿದ್ದಾರೆ.
ಇಂದು ಸಂಜೆ 5 ಗಂಟೆಗೆ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಅಧ್ಯಕ್ಷತೆಯನ್ನು ದಾವಣಗೆರೆ ಈಶ್ವರೀಯ ವಿದ್ಯಾಲಯದ ಸಂಚಾಲಕರಾದ ಲೀಲಾ ಅಕ್ಕನವರು ವಹಿಸಲಿದ್ದಾರೆ. ಶಾಸಕ ಶಾಂತನಗೌಡ ಉದ್ಘಾಟಿಸಲಿದ್ದಾರೆ. ಕೂಡ್ಲಿಗಿ ಚಂದ್ರಕಲಾ ಅವರಿಂದ ಉಪನ್ಯಾಸ ನಡೆಯಲಿದೆ ಹಾಗೂ ಮುಖ್ಯ ಅಥಿತಿಗಳು ಭಾಗವಹಿಸಲಿರುವರು.
ನಾಳೆ ಮಂಗಳವಾರ ಕಾರ್ಯಕ್ರಮವನ್ನು ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಉದ್ಘಾಟಿಸಲಿದ್ದು, ಆರ್ಸಿಬಿ ಡ್ಯಾನ್ಸ್ ಗ್ರೂಪ್ನವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಳಿಯಾಳ ಹೊಂಗಿರಣ ಕಲಾ ತಂಡದಿಂದ ಗೊಂಬೆ ಆಟ ನಡೆಯಲಿದೆ.
ನಾಡಿದ್ದು ಬುಧವಾರ ಮಹಾಶಿವರಾತ್ರಿ ಸಮಾರೋಪ ಸಮಾರಂಭದಲ್ಲಿ ಹೊನ್ನಾಳಿ ಶ್ರೀಗಳ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಭಿನೇತ್ರಿ ಡ್ಯಾನ್ಸ್ ಮ್ಯೂಸಿಕ್ ಅಕಾಡೆಮಿಯಿಂದ ನೃತ್ಯ ರೂಪಕ ನಡೆಯಲಿದೆ. ಶಿಬಿರವು ಫೆ.6ರಿಂದ 12ರ ವರೆಗೆ ಪ್ರತಿ ದಿನ 1 ಗಂಟೆ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ 11 ಅಡಿ ಶಿವಲಿಂಗ, ಅಭಿಷೇಕ ಲಿಂಗ, 20 ಜನ ಶ್ವೇತ ವಸ್ತ್ರದಾರಿ ಬ್ರಹ್ಮಾಕುಮಾರಿಯವರಿಂದ ಸಾಮೂಹಿಕ ರಾಜಯೋಗ ಅಭ್ಯಾಸ ನಡೆಯಲಿದೆ ಎಂದು ತಿಳಿಸಿದೆ.