ದಾವಣಗೆರೆ, ಫೆ.2- ನಗರದ ಜಿ.ಎಂ. ವಿಶ್ವವಿದ್ಯಾಲಯದ ವತಿಯಿಂದ `ಜ್ಞಾನ ಸರಣಿ’ ಶೀರ್ಷಿಕೆಯಡಿ ಒಟ್ಟು 9 ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ನ್ನು ನಾಳೆ ದಿನಾಂಕ 3 ರ ಸೋಮವಾರ ಜಿಎಂ ವಿವಿಯ ಎ.ವಿ. ಕೊಠಡಿಯಲ್ಲಿ ನಡೆಯಲಿದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿ.ಎಂ. ವಿವಿಯ ಕುಲಪತಿ ಡಾ.ಎಸ್.ಆರ್.ಶಂಕಪಾಲ್ ಅವರ ನಾಲ್ಕು, ಫಾರ್ಮಸಿ ವಿಭಾಗದ ವಿವಿಧ ಪ್ರಾಧ್ಯಾಪಕರ ನಾಲ್ಕು ಹಾಗೂ ಬೆಂಗಳೂರಿನ ದಂತ ವೈದ್ಯೆ ಡಾ. ಉಮಾ ಮುರುಳೀಧರ್ ವಿರಚಿತ ಒಂದು ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು.
ಅಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿವಿ ಕುಲಾಧಿಪತಿ ಜಿ.ಎಂ. ಲಿಂಗರಾಜ್, ಕುಲಪತಿ ಡಾ.ಎಸ್.ಆರ್. ಶಂಕಪಾಲ್, ಉಪ ಕುಲಪತಿ ಡಾ.ಹೆಚ್.ಡಿ. ಮಹೇಶ್ವರಪ್ಪ, ಪ್ರಾಚಾರ್ಯ ಡಾ. ಎಂ.ಬಿ. ಸಂಜಯ್ ಪಾಂಡೆ ಮತ್ತು ಇತರರು ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಎಂ ವಿವಿಯ ಮಾನವ ಸಂಪನ್ಮೂಲ ನಿರ್ದೇಶಕ ಡಾ.ಟಿ.ಎಂ. ವೀರಗಂಗಾಧರ ಸ್ವಾಮಿ, ಜಿ.ಎಂ ಇನ್‌ಸ್ಟಿ ಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್ ಅಂಡ್ ರಿಸರ್ಚ್ ಪ್ರಾಂಶುಪಾಲ ಡಾ. ಗಿರೀಶ್ ಬೋಳಕಟ್ಟೆ ಉಪಸ್ಥಿತರಿದ್ದರು.