ಸ್ಪ್ರಿಂಕ್ಲರ್‌ ಪೈಪ್‌ ಪಡೆಯಲು ಅರ್ಜಿ ಆಹ್ವಾನ

ದಾವಣಗೆರೆ, ಫೆ.2- ಕೃಷಿ ಇಲಾಖೆ ವತಿಯಿಂದ 2024-25ನೇ ಸಾಲಿನ ತುಂತುರು ನಿರಾವರಿ ಯೋಜನೆಯಡಿ ಸ್ಪ್ರಿಂಕ್ಲರ್‌ ಪೈಪ್‌ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿಯ ಫಲಾನುಭವಿಗಳು ಈ ಹಿಂದೆ ಸ್ಪ್ರಿಂಕ್ಲರ್‌ ಪೈಪ್‌ ಪಡೆದಿದ್ದರೂ ಸಹ 3 ಎಕರೆ 21 ಗುಂಟೆ ಭೂಮಿ ಇರುವವರು ಹೆಚ್ಚುವರಿಯಾಗಿ ಇನ್ನೊಂದು ಘಟಕಕ್ಕೆ ಅರ್ಜಿ ಸಲ್ಲಿಸಬಹುದು.

ಮಾಹಿತಿಗಾಗಿ ಕಸಬಾ 8277931143, ಆನಗೋಡು 8277931137, ಮಾಯಕೊಂಡ 8277931136 ಹಾಗೂ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು.

error: Content is protected !!