ಕೊಟ್ಟೂರು, ಜ.14- ಪಟ್ಟಣದ ಕೌಲುಪೇಟೆಯ ಶ್ರೀ ಬನಶಂಕರಿ ದೇವಿಯ ರಥೋತ್ಸವ ಸೋಮವಾರ ಸಂಜೆ ಗೋದೂಳಿ ಸಮಯದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ – ಸಂಭ್ರಮದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಶ್ರೀ ಬನಶಂಕರಿ ದೇವಿಯ ನಾಲ್ಕನೇ ರಥೋತ್ಸವ ಇದ್ದಾಗಿದ್ದು, ರಥದಲ್ಲಿ ದೇವಿಯ ಮೂರ್ತಿಗೆ ಬೆಳಿಗ್ಗೆಯಿಂದ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ನಡೆಸಲಾಯಿತು. ನಂತರ ದೇವಸ್ಥಾನ ವತಿಯಿಂದ ಮಹಾ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸಂಜೆ ಹೊತ್ತಿಗೆ ಶ್ರೀ ಬನಶಂಕರಿ ದೇವಿಯ ಉತ್ಸವ ಅಲಂಕರಿಸ ಲಾದ ರಥದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ರಥೋತ್ಸವವು ಸಮಾಳ, ನಂದಿಕೋಲು ಕುಣಿತದ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವೈಭವದಿಂದ ರಥೋತ್ಸವ ಕೌಲುಪೇಟೆಯಿಂದ ರಾಜ ಗಂಭೀರದೊಂದಿಗೆ ಸಾಗಿ ಜವಳಿ ಸರ್ಕಲ್, ವಿಠಲ ದೇವಸ್ಥಾನದ ಮುಂಭಾಗದ ಮೂಲಕ ರೇಣುಕಾಚಾರ್ಯ ದೇವಸ್ಥಾನವರೆಗೂ ಸಾಗಿ ಪುನಃ ಬನಶಂಕರಿ ದೇವಿಯ ದೇವಸ್ಥಾನಕ್ಕೆ ಮರಳಿ ಸಂಜೆ 6.30ರ ವೇಳೆಗೆ ನಿಲುಗಡೆಗೊಂಡಿತು.
ದೇವಿಯ ರಥೋತ್ಸವಕ್ಕೆ ಭಕ್ತಾದಿಗಳು ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ದೇವಿಯ ಕೃಪೆಗೆ ಪಾತ್ರರಾದರು.