ಮಾನ್ಯರೇ,
ನಗರದ ಎಸ್.ಪಿ.ಎಸ್. ನಗರದ ರಿಂಗ್ ರಸ್ತೆಯಲ್ಲಿ ಇರುವ ವಿಭಜಕಗಳಲ್ಲಿ ಅವೈಜ್ಞಾನಿಕವಾಗಿ ಅಲ್ಲಲ್ಲಿ ತೆರವುಗೊಳಿಸಲಾಗಿದೆ. ಸಾರ್ವಜನಿಕರು ಇತ್ತ ಭಾಗದಿಂದ ಅತ್ತ ಭಾಗಕ್ಕೆ ಸಾಗಲು ಸುಲಭವಾಗಲೆಂದು ಇರುವಂತಹ ಕಬ್ಬಿಣದ ವಿಭಜಕಗಳನ್ನು ಕೆಲವು ಕಡೆ ತೆರವು ಮಾಡಲಾಗಿದೆ. ವಾಹನಗಳನ್ನು ಚಲಾಯಿಸುವವರಿಗೆ ವಿಭಜಕಗಳು ಇಲ್ಲದೇ ಇರುವ ಸ್ಥಳಗಳಲ್ಲಿ ಸರಿಯಾದ ಮಾಹಿತಿ ಅಥವಾ ಸೂಚನಾ ಫಲಕಗಳಾಗಲೀ, ಮಾರ್ಕಿಂಗ್ ಆಗಿರಲಿ ಏನೂ ಇರುವುದಿಲ್ಲ.
ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆಯು ಈ ರಸ್ತೆಯಲ್ಲಿ ಕ್ರಮೇಣ ಹೆಚ್ಚಾಗುತ್ತಿವೆ. ಘನ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮಕ್ಕಳು, ವಯೋವೃದ್ಧರು, ಮೂಕ ಪ್ರಾಣಿಗಳು ಈ ನಿಯಮ ಬಾಹಿರ ತೆರವುಗೊಳಿಸಿದ ವಿಭಜಕಗಳ ಸ್ಥಳದಿಂದ ಒಮ್ಮೆಲೇ ಬಂದರೆ ವಾಹನ ಸವಾರರಿಗೆ ಅನಾಹುತ ತಪ್ಪಿಸುವುದು ಸುಲಭವಾಗಿರುವುದಿಲ್ಲ.
ಆದ್ದರಿಂದ, ಇದಕ್ಕೆ ಸಂಬಂಧ ಪಟ್ಟಂತಹ ಅಧಿಕಾರಿಗಳು ಈ ಕೂಡಲೇ ನಿಯಮ ಬಾಹಿರ ವಿಭಜಕಗಳನ್ನು ಮುಚ್ಚುವ ಹಾಗೇ ಅಥವಾ ತೆರವುಗೊಳಿಸಲಾದ ಸ್ಥಳಗಳಲ್ಲಿ ನಿಧಾನವಾಗಿ ಚಲಿಸಿ ಎಂಬ ಸೂಚನಾ ಫಲಕಗಳು ಅಥವಾ ಮಾರ್ಕಿಂಗ್ ಮಾಡಬೇಕು. ಈ ರೀತಿ ಮಾಡಿದರೆ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಅನುಕೂಲ ಮಾಡಿಕೊಟ್ಟಂತಾಗುವುದು.
– ವೈ. ವಾದಿರಾಜ ಭಟ್, ವಕೀಲರು, ಎಸ್.ಪಿ.ಎಸ್. ನಗರ ನಿವಾಸಿ.