ಕೊಟ್ಟೂರಿನಲ್ಲಿ ಶ್ರೀ ಕೊಟ್ಟೂರೇಶ್ವರ ಕಾರ್ತಿಕೋತ್ಸವ

ಕೊಟ್ಟೂರಿನಲ್ಲಿ ಶ್ರೀ ಕೊಟ್ಟೂರೇಶ್ವರ ಕಾರ್ತಿಕೋತ್ಸವ

ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದ ಸ್ವಾಮೀಜಿ, ಜಿಲ್ಲಾಧಿಕಾರಿ ದಿವಾಕರ್‌

ಕೊಟ್ಟೂರು, ಡಿ.16- ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಪ್ರಣತಿಯಲ್ಲಿ ಸಂಜೆ 6ರ ಹೊತ್ತಿಗೆ ಸ್ವಾಮೀಜಿಗಳು, ಅಧಿಕಾರಿಗಳು, ಪ್ರಮುಖರು ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು. ನಂತರದಲ್ಲಿ ಸ್ವಾಮಿಯ ಭಕ್ತರು ಪ್ರಣತಿಯಲ್ಲಿ ಎಣ್ಣೆ, ಬತ್ತಿ ಹಾಕಿ ಭಕ್ತಿ ಸಮರ್ಪಿಸಿದರು. 

ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಕಾರ್ತಿ ಕೋತ್ಸವ ಪ್ರಯುಕ್ತ ಸಂಜೆ ಕ್ರಿಯಾಮೂರ್ತಿಗಳಾದ ಶ್ರೀ ಶಿವಪ್ರಕಾಶ ಕೊಟ್ಟೂರು ದೇವರು, ಉತ್ತಂಗಿ ಮಠದ ಶ್ರೀ ಸೋಮಶಂಕರ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ತೀಕೋತ್ಸವಕ್ಕೆ ಸಂಜೆ 6 ಕ್ಕೆ ಚಾಲನೆ ನೀಡಲಾಯಿತು. 

ಕೊಬ್ಬರಿ ಸುಡುವುದಕ್ಕಾಗಿ ಚೌಕಕಾರದ ತೊಟ್ಟಿ ನಿರ್ಮಿಸಲಾಗಿತ್ತು. ನಾಡಿನೆಲ್ಲೆಡೆಯಿಂದ ಆಗಮಿಸಿದ್ದ ಭಕ್ತರ ದಂಡು ದೀಪಗಳಿಗೆ ಎಣ್ಣೆ ಹಚ್ಚಿ ಕವಿದ ಕತ್ತಲು ಸರಿದು ಬೆಳಕು ಚೆಲ್ಲಲಿ ಎಂಬಂತೆ ಪ್ರಾರ್ಥಿಸಿದರು. 

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಎ.ಎಸ್.ಪಿ. ಸಲೀಂಪಾಷ,  ದೇವಸ್ಥಾನದ ಇಒ ಹನುಮಂತಪ್ಪ, ಧರ್ಮಕರ್ತ ಎಂ.ಕೆ. ಶೇಖರಯ್ಯ ಸ್ವಾಮೀಜಿಗಳೊಂದಿಗೆ ಪ್ರಣತಿಗಳಲ್ಲಿ ದೀಪ ಬೆಳಗಿಸಿದರು. ಕಾರ್ತಿಕೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ನೆರೆದಿದ್ದ ಭಕ್ತರು ಪ್ರಣತಿಗಳಿಗೆ ಎಣ್ಣೆ ಹಾಕಿ ದೀಪ ಹಚ್ಚಿ ಸ್ವಾಮಿಗೆ ಭಕ್ತಿ ಸಮರ್ಪಿಸಿದರು. ಜೀವನದ ಕೆಟ್ಟ ದಿನಗಳು ಇನ್ನಿಲ್ಲವಾಗಲಿ ಎಂಬ ಸಂಕೇತ ಎಂಬಂತೆ ಬೆಂಕಿಗೆ ಕೊಬ್ಬರಿ ಹಾಕಿ ಸುಟ್ಟರು.

ಮುಖಂಡರಾದ ಕೆ.ಮಂಜುನಾಥಗೌಡ, ನಾಗರಾಜಗೌಡ, ಕೆ.ಗುರುಸಿದ್ದನಗೌಡ, ಪ್ರೇಮಾ ನಂದಗೌಡ, ಅಜ್ಜನಗೌಡ, ದೇವಸ್ಥಾನ ಸಿಬ್ಬಂದಿ ಗಳಾದ ದೀಪು, ಕಾರ್ತಿಕ, ಪ್ರಶಾಂತ, ರೇವಣ್ಣ, ನಾಗರಾಜ, ಕೊಟ್ರಮ್ಮ ಸೇರಿ ಇತರರು ಇದ್ದರು.

ಲಕ್ಷ ದೀಪೋತ್ಸವ : ಸ್ವಾಮಿ ಕಾರ್ತಿಕೋತ್ಸವದ ಪ್ರಯುಕ್ತ ಶ್ರೀ ಕೊಟ್ಟೂರೇಶ್ವರ ಕಲ್ಯಾಣ ಮಂಟಪ ಸಮಿತಿಯವರು ಲಕ್ಷ ದೀಪೋತ್ಸವ ಆಯೋಜಿಸಿ ದ್ದರು. ತೇರುಗಡ್ಡೆಯಿಂದ ತೇರು ಬೀದಿಯ ಎರಡೂ ಬದಿಗಳಲ್ಲಿ ದೀಪಗಳನ್ನು ಇರಿಸಲಾಗಿತ್ತು.

error: Content is protected !!