ಮಲೇಬೆನ್ನೂರು, ಡಿ.8- ನಂದಿಗುದಿ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿಕಾರಿಪುರದಿಂದ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಕೊಮಾರನಹಳ್ಳಿ ಬಳಿ ಸ್ವಾಗತ ಮಾಡಿಕೊಂಡು ನಂತರ ಮಲೇಬೆನ್ನೂರಿನಿಂದ ಬಸಾಪುರ, ಬೇವಿನಹಳ್ಳಿ, ಹಳ್ಳಿಹಾಳ್, ಕೊಕ್ಕನೂರು, ಹಿಂಡಸಘಟ್ಟ, ಗೋವಿನಹಾಳ್ ಮಾರ್ಗವಾಗಿ ಬೃಹತ್ ಬೈಕ್ ರ‍್ಯಾಲಿ ಯ ಮೂಲಕ ನಂದಿಗುಡಿ ಬೃಹನ್ಮಠಕ್ಕೆ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ಕರೆತರಲಾಯಿತು.
January 12, 2025