ದಾವಣಗೆರೆ, ಡಿ.4 – ಮಹಾನಗರ ಪಾಲಿಕೆ ವತಿಯಿಂದ ಕಳೆದ ವಾರ ನಡೆದ 69ನೇ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಚಿರಂತನ ತಂಡ ಕರ್ನಾಟಕ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಸಿಕೊಟ್ಟಿತು. ಕರ್ನಾಟಕದ ವಿವಿಧ ನೃತ್ಯ ಪ್ರಕಾರಗಳಲ್ಲಿ ಕರ್ನಾಟಕದ ವೈಭವ ಬಿಂಬಿಸುವ ಹಾಡುಗಳಿಗೆ ನೃತ್ಯ ಪ್ರಸ್ತುತಪಡಿಸಲಾಯಿತು. ಚಿರಂತನದ ಗುರುಗಳಾದ ವಿದುಷಿ ರಕ್ಷಾ ರಾಜಶೇಖರ್ ಹಾಗು ಶ್ರೀಮತಿ ದೀಪಾ ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ಈ ಸುಂದರ ನೃತ್ಯಗಳಿಗೆ ಪ್ರೇಕ್ಷಕರ ಮೆಚ್ಚುಗೆ ದೊರಕಿತು.
December 27, 2024