ಹರಿಹರ, ಡಿ.4- ನಗರದ ಶ್ರೀಶೈಲ ಮಹಾಪೀಠದ ಶ್ರೀ ಜಗದ್ಗುರು ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠದ ಕಾರ್ಯದರ್ಶಿ ಆರ್.ಟಿ.ಪ್ರಶಾಂತ್ ದುಗ್ಗತ್ತಿಮಠ ಅವರು ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದು, ಅವರನ್ನು ಹರಿಹರ ತಾಲ್ಲೂಕಿನ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹರಿಹರ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ಬಿಇಓ ದುರ್ಗಪ್ಪ ಮಾತನಾಡಿದರು. ಪ್ರಾಸ್ತಾವಿಕವಾಗಿ ಆರ್.ಆರ್. ಮಠ ಮಾತನಾಡಿದರು. ಶಿಕ್ಷಕರಾದ ಆರ್.ಬಿ.ಮಲ್ಲಿಕಾರ್ಜುನ್ ನಿರೂಪಿಸಿದರು. ಕೆ.ಜಿ.ನಂಜುಂಡಪ್ಪ ವಂದಿಸಿದರು.
ಸಂಘದ ಪದಾಧಿಕಾರಿಗಳಾದ ರುದ್ರಪ್ಪ ಕಾಶೀಪುರ, ಬಿ.ಎನ್.ವೀರಪ್ಪ, ಕೆ.ಎನ್.ಬಸವರಾಜಪ್ಪ, ಚನ್ನವೀರಯ್ಯ ಹಿರೇಮಠ, ಹೆಚ್.ಕೆ.ಸತೀಶ್ ಕುಮಾರ್, ಮುಸ್ತಾಕ್ ಅಹಮದ್ ರಾಜ್ಯ ಪರಿಷತ್ ಸದಸ್ಯ ಉಮ್ಮಣ್ಣ, ನಿಕಟಪೂರ್ವ ಅಧ್ಯಕ್ಷರಾದ ರೇವಣಸಿದ್ದಪ್ಪ ಅಂಗಡಿ, ಭೂಮೇಶ್, ಶರಣ ಕುಮಾರ ಹೆಗಡೆ, ಗದಿಗೆಪ್ಪ ಹಳೆಮನೆ, ಮಂಚಪ್ಪ ಬಿದರಿ, ಕೆಎನ್ಬಿ, ನೌಕರ ಸಂಘದ ನಿರ್ದೇಶಕರಾದ ಅಶ್ಪಾಕ್ ಅಹಮದ್, ಗಿರೀಶ್ ಇತರರು ಭಾಗವಹಿಸಿದ್ದರು.