ಹರಿಹರ, ನ. 27 – ನಗರದ ಕಾಳಿದಾಸ ವಿದ್ಯಾಸಂಸ್ಥೆ ಆವರಣದಲ್ಲಿ ಶ್ರೀ ಕಾಳಿದಾಸ ಎಜುಕೇಶನಲ್ ಮತ್ತು ಕಲ್ಚರಲ್ ಟ್ರಸ್ಟ್ ಹಾಗೂ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳ ಪೋಷಕರು ಸೇರಿದಂತೆ ಸಾರ್ವಜ ನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಎಸ್.ಎಸ್. ಕೇರ್ ಟ್ರಸ್ಟ್ ನಿಂದ ವಿವಿಧ ರೋಗಗಳಿಗೆ ಸಂಬಂಧಿಸಿದ ಕಾಯಿಲೆಗೆ ಚಿಕಿತ್ಸೆ ನೀಡುವುದರ ಜೊತೆಗೆ, ಹತ್ತು ದಿನಕ್ಕೆ ಬೇಕಾದ ಔಷಧಿಯನ್ನು ಉಚಿತವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಾಳಿದಾಸ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಬಿ. ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ಉಪಾಧ್ಯಕ್ಷ ಹುಲುಗಪ್ಪ, ಸಹ ಕಾರ್ಯದರ್ಶಿ ಪಾಲಾಕ್ಷಪ್ಪ ಭಾನುವಳ್ಳಿ, ನಿರ್ದೇಶಕ ನಂದಿಗಾವಿ ಶ್ರೀನಿವಾಸ್,
ಟಿ. ರಾಮಚಂದ್ರಪ್ಪ ಕೊಕ್ಕನೂರು, ಜಿ.ಪಿ. ಶಿವರಾಜ್ ಕೊಕ್ಕನೂರು, ಕೆ.ಹೆಚ್. ಆನಂದ್ ಕುಂಬಳೂರು, ಯಕ್ಕೆಗೊಂದಿ ನಾಗರಾಜ್, ಎಸ್.ಎಂ. ಅಂಜಿನಪ್ಪ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಎಸ್.ಎಸ್. ಕೇರ್ ಟ್ರಸ್ಟ್ ಕೋ ಆರ್ಡಿನೇಟರ್ ಜಿ.ಪಿ. ಹರೀಶ್, ಡಾ. ಆಶಾ, ಡಾ. ಶ್ರೀದೇವಿ, ಡಾ. ಪ್ರೀತಿ ಸುರಪುರ, ಡಾ. ಅನುಷಾ, ಡಾ. ಮಧು, ಮುಖ್ಯ ಶಿಕ್ಷಕ ನಿಜಲಿಂಗಪ್ಪ, ಕೃಷ್ಣಮೂರ್ತಿ ನಗರಸಭೆ ನಾಮ ನಿರ್ದೇಶನ ಸದಸ್ಯ ಸಂತೋಷ ದೊಡ್ಡಮನಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ್, ಮಂಜುನಾಥ್ ಇತರರು ಹಾಜರಿದ್ದರು.