ದಾವಣಗೆರೆ, ನ.12- ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ ಹಾಗೂ ವಾಲ್ಮೀಕಿ ವಿದ್ಯಾರ್ಥಿ ನಿಲಯದ ಕುರಿತಂತೆ ವಕೀಲ ಗುಮ್ಮನೂರು ಮಲ್ಲಿಕಾರ್ಜುನ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ವಾಲ್ಮೀಕಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಕೆ. ಉಚ್ಚೆಂಗೆಪ್ಪ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸಂಘ-ಸಂಸ್ಥೆ, ಸಮಾಜದ ಪದಾಧಿಕಾರಿ ಗಳನ್ನು ಸರ್ವ ಸದಸ್ಯರ ಸಭೆ ಕರೆದು ಚರ್ಚಿಸಿ, ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತದೆ. ಅದರಂತೆ ಬಿ. ವೀರಣ್ಣ ಅವರನ್ನೂ ಸಹ ಆಯ್ಕೆ ಮಾಡಲಾಗಿದೆಯೇ ಹೊರತು, ಏಕಪ ಕ್ಷೀಯ ತೀರ್ಮಾನದಿಂದ ಅಲ್ಲ ಎಂದು ಪ್ರತಿಪಾದಿಸಿ ದರು. ಕಾರ್ಯದರ್ಶಿ ಶ್ಯಾಗಲೆ ಮಂಜುನಾಥ್, ಮುಖಂಡರಾದ ಸಿರಿಗೆರೆ ರಂಗಪ್ಪ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಗುಮ್ಮನೂರು ಶಂಭುಲಿಂಗಪ್ಪ. ಮಹೇಶ್ ಪೈಲ್ವಾನ್, ಆವರಗೆರೆ ಸುರೇಶ್, ಫಣಿಯಾಪುರ ಲಿಂಗರಾಜು, ಹದಡಿ ರಾಜಪ್ಪ ಸೇರಿದಂತೆ ಇತರರು ಇದ್ದರು.