ಚಳ್ಳಕೆರೆ, ಅ.28- ಒಳ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ತೀರ್ಪಿನಂತೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಾದಿಗ ಮಹಾಸಭಾ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಮನೆ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿತು.
ಧರಣಿಯಲ್ಲಿ ಟಿ. ವಿಜಯಕುಮಾರ್, ಎನ್. ಪ್ರಕಾಶ್, ನಾಗರಾಜ್ ಡಿಕ್ಕಿ, ತಿಪ್ಪೇಸ್ವಾಮಿ, ಭೀಮಾ ಕೆರೆ ಶಿವಮೂರ್ತಿ ಸೇರಿದಂತೆ ಇತರರು ಇದ್ದರು.