ಮಲೇಬೆನ್ನೂರಿನಲ್ಲಿ ವಾಲ್ಮೀಕಿ ಶೋಭಾಯಾತ್ರೆ

ಮಲೇಬೆನ್ನೂರಿನಲ್ಲಿ ವಾಲ್ಮೀಕಿ ಶೋಭಾಯಾತ್ರೆ

ಮಲೇಬೆನ್ನೂರು, ಅ.28- ಇಲ್ಲಿನ ರಾಜಾವೀರ ಮದಕರಿ ನಾಯಕ ಯುವ ಸೇವಾ ಸಮಿತಿ ವತಿಯಿಂದ ಭಾನುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಭಾವಚಿತ್ರದ ಬೃಹತ್‌ ಶೋಭಾಯಾತ್ರೆ ಸಂಭ್ರಮದಿಂದ ಜರುಗಿತು.

ಪಟ್ಟಣದ ನೀರಾವರಿ ಇಲಾಖೆಯ ಕಛೇರಿ ಯಿಂದ ಆರಂಭವಾದ ಶೋಭಾಯಾತ್ರೆ ರಾಜ ಬೀದಿಗಳಲ್ಲಿ ಸಂಚರಿಸಿತು. 

ಶಾಸಕ ಬಿ.ಪಿ. ಹರೀಶ್‌, ಕಾಂಗ್ರೆಸ್‌ ಮುಖಂಡ ನಂದಿಗಾವಿ ಶ್ರೀನಿವಾಸ್‌, ಬಿಜೆಪಿ ಮುಖಂಡ ಚಂದ್ರಶೇಖರ್‌ ಪೂಜಾರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್‌ ಪಟೇಲ್‌, ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಪುರಸಭೆ ಪ್ರಭಾರಿ ಅಧ್ಯಕ್ಷೆ ನಪ್ಸೀಯಾ ಬಾನು ಚಮನ್‌ಷಾ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಮಂಜುನಾಥ್‌, ಸಮಾಜದ ಮುಖಂಡರಾದ ಕೊಕ್ಕನೂರು ಸೋಮಶೇಖರ್‌, ಹರಿಹರ ಪಾರ್ವತಿ ಬೋರಯ್ಯ, ಜಿಗಳಿಯ ಬಿ. ಚಂದ್ರಪ್ಪ, ಬಿ.ಎಂ. ದೇವೇಂದ್ರಪ್ಪ ಸೇರಿದಂತೆ ಇನ್ನೂ ಅನೇಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 

error: Content is protected !!