ಹರಿಹರ, ಅ. 3 – ನಗರದ ದಸರಾ ಉತ್ಸವ ಸಮಿತಿಯಿಂದ ನಾಮದೇವ ಶಿಂಪಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ದೇವಿ ಆರಾಧನೆ ಹಾಗೂ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.
ದುರ್ಗಾದೇವಿ ಮೂರ್ತಿ ದಾನಿಗಳಾದ ಮಾಜಿ ನಗರಸಭೆ ಅಧ್ಯಕ್ಷೆ ಸುಜಾತ ರೇವಣ ಸಿದ್ದಪ್ಪ ಅಮರಾವತಿ ಕುಟುಂಬದ ಸದಸ್ಯರು ವಿಶೇಷ ಪೂಜೆಯನ್ನು ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ದಸರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶಂಕರ್ ಖಟಾವ್ಕರ್, ಖಜಾಂಚಿ ಅಜಿತ್ ಸಾವಂತ್, ರಾಜು ಕಿರೋಜಿ, ಟಿ. ಜೆ. ಮುರುಗೇಶಪ್ಪ, ಹನುಮಂತ್ ರೆಡ್ಡಿ, ಅಮರಾವತಿ ರೇವಣ ಸಿದ್ದಪ್ಪ, ನಗರಸಭಾ ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ಶಿವಪ್ರಕಾಶ್ ಶಾಸ್ತ್ರಿ, ಪ್ರಕಾಶ್ ಶ್ರೇಷ್ಟಿ, ಅಂಬಾಸ ಹಂಸಾಗರ್, ಕಂಚಿಕೇರಿ ಕರಿಬಸಪ್ಪ, ಚಿದಂಬರ ಜೋಯಿಸರು ಮತ್ತು ಲಕ್ಷ್ಮಿಕಾಂತ ಜೋಯಿಸರು, ಮಹಿಳೆ ಮಂಡಳಿಯ ನಾಗಮಣಿ ಶಾಸ್ತ್ರಿ, ರೂಪ ಶಶಿಕಾಂತ್ ಮಂಜುಳಾ, ಅಂಜನಾ ಖಟಾವ್ಕಾರ್, ಸಾವಿತ್ರಮ್ಮ, ಶಾರದಾ ಶಾಸ್ತ್ರಿ, ನಾಗರತ್ನ ಶಿಲ್ಪಾ ಇತರರು ಹಾಜರಿದ್ದರು.