ಇನ್‌ಸೈಟ್ಸ್ ಐಎಎಸ್ ತರಬೇತಿ ಕೇಂದ್ರದ ಸಂಸ್ಥಾಪಕ ಜಿ.ಬಿ. ವಿನಯಕುಮಾರ್
ದಾವಣಗೆರೆ, ಸೆ.30- ಎಲ್ಲಾ ಜಾತಿಗಳ ಮಧ್ಯೆ ಸಮನ್ವಯತೆ ಇದ್ದಾಗ ಮಾತ್ರ ಸಮಾ ಜವು ಚಲನಶೀಲವಾಗಿರಲಿದೆ ಎಂದು ಇನ್ ಸೈಟ್ಸ್ ಐಎಎಸ್ ತರಬೇತಿ ಕೇಂದ್ರದ ಸಂಸ್ಥಾ ಪಕ ಜಿ.ಬಿ. ವಿನಯಕುಮಾರ್ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಪೆರಿಯಾರ್ ರಾಮಸ್ವಾಮಿ ನಾಯಕರ್ ವಿಚಾರ ವೇದಿಕೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪೆರಿಯಾರ್ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೆರಿಯಾರ್ ರಾಮಸ್ವಾಮಿ ನಾಯಕರ್ ಅವರು ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ ಮಹಾತ್ಮರಾಗಿದ್ದು, ಸಮಾಜದ ಬದಲಾವಣೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಅವರನ್ನು ಸ್ಮರಿಸಿದರು.
ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ್, ಜ್ಯೋತಿಬಾ ಫುಲೆಯಂತವರು ಸಾಮಾಜಿಕ ಬದಲಾವಣೆಗೆ ಅಂದೇ ತುಡಿದಿದ್ದರು. ಆದರೆ, ಇಂದಿಗೂ ಸಾಮಾಜಿಕ ಬದಲಾವಣೆ ಸಾಧ್ಯವಾಗಿಲ್ಲ. ಅದಕ್ಕಾಗಿಯೇ ಅಂಬೇಡ್ಕರ್ ರಾಜಕೀಯ ಪರಿವರ್ತನೆ ಬರುವ ವರೆಗೂ ಸಾಮಾಜಿಕ ಬದಲಾವಣೆ ಅಸಾಧ್ಯ ಎಂದಿದ್ದರು ಎಂದರು.
ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ 2ನೇ ಬಾರಿ ಸಿಎಂ ಆಗಿರುವುದನ್ನು ಸಹಿಸಲಾಗದವರು, ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪಿತೂರಿ ನಡೆಸುತ್ತಿದ್ದಾರೆ. ಇದರ ಹಿಂದೆ ತಳ ಸಮುದಾಯದವರು ಬೆಳೆಯಬಾರದು ಎಂಬ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ಶಿಕ್ಷಣ ಇಲ್ಲದೇ ಹೋರಾಟ ಮಾಡುವು ದು ನಿರರ್ಥಕ. ರಾಜಕಾರಣದಲ್ಲಿ ಭಾಗಿಯಾ ಗದೇ ಹೋರಾಟ ಮಾಡಲಾಗದು. ಕೆಲವರ ಮೇಲಿನ ಹೆದರಿಕೆ ಹಾಗೂ ನಮಗೆ ಸಿಗುತ್ತಿರುವ ಸಣ್ಣ, ಪುಟ್ಟ ಅವಕಾಶಗಳಿಗಾಗಿ ರಾಜೀ ಮಾಡಿಕೊಂಡು ಹೋಗುತ್ತಿರುವುದರಿಂದಲೇ ಸಮಾಜದಲ್ಲಿನ ತಾರತಮ್ಯ ಮತ್ತಷ್ಟು ಹೆಚ್ಚುತ್ತಿದೆ. ಸಿದ್ಧಾಂತವನ್ನು ಕಾರ್ಯರೂಪಕ್ಕೆ ತರದೇ ಭಾಷಣ ಮಾಡುವುದು ವ್ಯರ್ಥ ಪ್ರಯತ್ನವಾಗಲಿದೆ ಎಂದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಸ್ಥಾಪಿತ ವ್ಯವಸ್ಥೆಯನ್ನು ನಾಶಗೊಳಿಸಿ, ಹೊಸದನ್ನು ಕಟ್ಟಲು ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ಪ್ರಯತ್ನಿಸಿದ್ದರು. ಅನಾದಿ ಕಾಲದಿಂದ ಬಂದ ಶ್ರೇಣೀಕೃತ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಪೆರಿಯಾರ್ ಶ್ರಮಿಸಿದ್ದರು ಎಂದು ಹೇಳಿದರು.
ಸತ್ಯದ ಪರವಾಗಿ ಮಾತನಾಡಿದವರು ಮತ್ತು ಬಹುಜನರ ಒಳಿತಿಗಾಗಿ ಕೆಲಸ ಮಾಡಿದವರು ಅಧಿಕಾರ ಅಥವಾ ಅವಕಾಶವನ್ನು ಕಳೆದು ಕೊಳ್ಳುತ್ತಲೇ ಬಂದಿದ್ದಾರೆ. ಆದರೆ, ಜನರಿಗಾಗಿ ಏನೂ ಮಾಡದೇ ಅಚ್ಛೇ ದಿನ್ ಘೋಷಣೆ ಕೊಟ್ಟು ಸುಳ್ಳು ಹೇಳುತ್ತಿರುವವರನ್ನು ಸಂಭ್ರಮಿಸುತ್ತಿ ರುವುದು ವಿಪರ್ಯಾಸ ಎಂದರು.
ಕಾರ್ಯಕ್ರಮದಲ್ಲಿ ವಕೀಲ ಅನೀಸ್ ಪಾಷ, ವೇದಿಕೆಯ ಹೆಚ್. ಮಲ್ಲೇಶ್, ಬುಳಸಾಗರದ ಸಿದ್ದರಾಮಪ್ಪ, ರಂಗನಾಥ್, ಎಚ್.ಸಿ. ಗುಡ್ಡಪ್ಪ, ತಿಪ್ಪಣ್ಣ ಮತ್ತಿತರರಿದ್ದರು.