ಇಂದು ಪಟಾಕಿ ವರ್ತಕರಿಗೆ ಕಾರ್ಯಾಗಾರ

ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ಬೆಳಿಗ್ಗೆ 10 ಗಂಟೆಗೆ ಎಸ್‌.ಬಿ.ಸಿ. (ಅಥಣಿ) ಕಾಲೇಜು ಸಭಾಂಗಣದಲ್ಲಿ  ಜಿಲ್ಲಾ ಪಟಾಕಿ ವರ್ತಕರಿಗೆ  ಅಗ್ನಿಶಾಮಕ ದಳ ಇಲಾಖೆ ವತಿಯಿಂದ ಕಾರ್ಯಾಗಾರ ಏರ್ಪಡಿಸಲಾಗಿದೆ. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಕಾಲೇಜಿನ ಪ್ರಾಚಾರ್ಯ ಡಾ. ಷಣ್ಮುಖಪ್ಪ, ಗುರು, ಅಗ್ನಿಶಾಮಕ ದಳದ ಅಧಿಕಾರಿ ಅಶೋಕ ಭಾಗವಹಿಸಲಿದ್ದು, ಸಂಘದ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. 

error: Content is protected !!