ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದ ಕಾರ್ಯಕ್ರಮದಲ್ಲಿ ಡಾ.ಪಿ.ಎಸ್.ಸುರೇಶ್ ಬಾಬು
ದಾವಣಗೆರೆ, ಸೆ. 29 – ನಗರದ ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದಿಂದ ಇಂದು ನಡೆದ ಸರ್ವ ಸದಸ್ಯರ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾ ಡಿದ ಡಾ. ಪಿ. ಎಸ್. ಸುರೇಶ್ ಬಾಬು, ಇಂದಿನ ಮಕ್ಕಳಲ್ಲಿ ವಿದ್ಯಾಭ್ಯಾಸದಲ್ಲಿ ಪೈಪೋಟಿ ಇದ್ದು ಮಕ್ಕಳಿಗೆ ಪ್ರೋತ್ಸಾಹ ನೀಡುವುದರಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ. 94.33 ಅಂಕವನ್ನು ಪಡೆದ ಕು. ಶೃತಿ ಬಿ.ಎಸ್, ಅಂತಿಮ ಬಿಎಸ್ಸಿ ಪದವಿಯಲ್ಲಿ ಶೇ.93 ಅಂಕವನ್ನು ಪಡೆದ ಕು. ಅರ್ಪಿತ, ಹಾಗೂ ಎಂಬಿಎ ಪದವಿಯಲ್ಲಿ ಶೆ. 94 ಅಂಕವನ್ನು ಪಡೆದು 6 ರಾಂಕ್ ಪಡೆದ ಕು. ಸಿರಿಲಕ್ಷ್ಮಿ ಇವರಿಗೆ ಸಂಸ್ಥೆ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಸ್ಥೆಯಿಂದ ಹೊಸ ಯೋಜನೆಗಳನ್ನು ಸಭೆಗೆ ವಿವರಿಸಿದರು. ಶಿಕ್ಷಕರ ದಿನಾಚರಣೆ ಅಂಗವಾಗಿ ವೃತ್ತಿಯಲ್ಲಿ ಶಿಕ್ಷಕರಾಗಿ ನಿವೃತ್ತಿಯನ್ನು ಪಡೆದಂತಹ ನಾಗೇಶ್ ರಾವ್ ಕೇಂಜೆ ಹಾಗೂ ಶ್ರೀಮತಿ ಶುಭ ವಸಂತ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಭಾರತ ಸರ್ಕಾರದ ಅಧೀನದಲ್ಲಿರುವ ನೌಕಾ ಪಡೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾದ ದಿವಾಕರ್ ಕಾಂತಾವರ ಹಾಗೂ ಸಮಾಜದ ಹಿರಿಯ ಕೊಲ್ಲೂರ್ ಜಯಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಕಾರ್ಯದರ್ಶಿ ಸುಬ್ರಹ್ಮಣ್ಯ ಎಲ್.ವಿ, ಖಜಾಂಚಿ ಉತ್ಸವ ವಿ.ಎನ್, ಸಾಂಸ್ಕೃ ತಿಕ ಮುಖ್ಯಸ್ಥ ಬಿ. ಟಿ ಚಂದ್ರಶೇಖರ್, ಉಪಾಧ್ಯಕ್ಷ ಪಿ .ಎಲ್. ಶಂಕರ್ ರಾವ್ ಉಪಸ್ಥಿತರಿದ್ದರು.
ಹೇಮಾ ಶಂಕರ್ ಪ್ರಾರ್ಥಿಸಿದರು. ಅಚ್ಯುತ ಮೂರ್ತಿ ಕಾಂತಾವರ ಎಲ್ಲರನ್ನು ಸ್ವಾಗತಿಸಿದರು. ವಿಜಯ್ ಕುಮಾರ್ ಕುಂಚಿತಬೆಟ್ಟು ವಂದಿಸಿದರು. ಅನಿಲ್ ಬಾರಂಗೆಳ ಕಾರ್ಯಕ್ರಮ ನಿರೂಪಿಸಿದರು.