ಹರಿಹರ, ಆ. 13 – ನಗರದ ಗಾಂಧಿ ವೃತ್ತದ ಬಳಿಯ ಹರಪನಹಳ್ಳಿ ರಸ್ತೆಯಲ್ಲಿ ಮೊನ್ನೆ ಭಾನುವಾರ ಮಧ್ಯರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸ್ಥಳೀಯ ಬಾಪೂಜಿ ಶಾಲೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಕೊಟ್ರೇಶ ಹೆಚ್. ಅವರ ಮಗ ಮನೋಜ್ ಕೆ. ಮನುಗುದ್ರಿ ಮೃತ ಯುವಕ. ದಾವಣಗೆರೆ ಕಡೆಯಿಂದ ಗಾಂಧಿ ವೃತ್ತದ ಮೂಲಕ ಬಂದ ಬೈಕ್ ಹರಪನಹಳ್ಳಿ ರಸ್ತೆ ಪಕ್ಕ ಪಾರ್ಕಿಂಗ್ ಸ್ಥಳದಲ್ಲಿ ಇಟ್ಟಿದ್ದ ಬ್ಯಾರಿಕೇಡ್ಗೆ ಡಿಕ್ಕಿಯಾಗಿ ನೆಲಕ್ಕೆ ಬಿದ್ದಿದ್ದು, ಹಿಂಬದಿ ಸವಾರನಾಗಿದ್ದ ಮನೋಜ್ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಚಾಲನೆ ಮಾಡುತ್ತಿದ್ದ ಪ್ರಸನ್ನ ಎನ್.ಕೆ. ಗಾಯಗೊಂಡಿದ್ದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಮನೋಜ್ನನ್ನು ಸ್ನೇಹಿತ ಪ್ರಸನ್ನ ತನ್ನ ಹುಟ್ಟು ಹಬ್ಬಕ್ಕೆಂದು ಭಾನುವಾರ ಮಧ್ಯಾಹ್ನ ಕರೆದುಕೊಂಡು ಹೋಗಿದ್ದು, ತಡರಾತ್ರಿ ಬರುವಾಗ ಅಪಘಾತವಾಗಿದೆ ಎಂದು ಮನೋಜ್ ತಂದೆ ಕೊಟ್ರೇಶ್ ದೂರಿನಲ್ಲಿ ವಿವರಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
January 15, 2025