ಸಿದ್ದರಾಮಣ್ಣ ಶರಣರ ನಿಧನಕ್ಕೆ ಪಾಂಡೋಮಟ್ಟಿ ಶ್ರೀಗಳ ಸಂತಾಪ

ದಾವಣಗೆರೆ, ಆ. 12 – ನಾಡಿನ ಹಿರಿಯ ಅನುಭಾವಿ ಶರಣರಾದ ವಿ. ಸಿದ್ದರಾಮಣ್ಣ ನಿಧನಕ್ಕೆ ಪಾಂಡೋಮಟ್ಟಿ ಶ್ರೀ ಗುರುಬಸವ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಣ್ಣ ಶರಣರು ಪಾಂಡೋಮಟ್ಟಿ ವಿರಕ್ತ ಮಠದ ಜೊತೆ ನಿಕಟ  ಸಂಪರ್ಕ ಹೊಂದಿದ್ದರು.  ಹಲವಾರು ಬಸವ ತತ್ವಜ್ಞಾನದ ಗ್ರಂಥಗಳನ್ನು ರಚಿಸಿದ್ದರು. ಶರಣರ ಚರಿತ್ರೆಯ ನಾಟಕಗಳನ್ನು ರಚಿಸಿ, ನಿರ್ದೇಶನ ಮಾಡಿದ ಅವರು ಈ ನಾಡು ಕಂಡ ಅಪರೂಪದ ಅನುಭಾವಿಗಳಾಗಿದ್ದರು. ಶಿವಯೋಗ ಸಾಧಕರು, ಅನುಪಮ ಪ್ರವಚನಕಾರರಾಗಿದ್ದರು ಎಂದು ಶರಣರ ಸಾಧನೆಯನ್ನು ಗುರು ಬಸವ ಶ್ರೀಗಳು ಸ್ಮರಿಸಿದ್ದಾರೆ.  

error: Content is protected !!