ಹರಿಹರ : ಹಿಂದೂ ಮಹಾಗಣಪತಿ ಹಂದರಗಂಬ ಪೂಜೆ

ಹರಿಹರ : ಹಿಂದೂ ಮಹಾಗಣಪತಿ ಹಂದರಗಂಬ ಪೂಜೆ

ಹರಿಹರ, ಅ.11- ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಮಹಾಗಣಪತಿ ಸಮಿತಿಯ ವತಿಯಿಂದ ಪ್ರತಿಷ್ಠಾಪನೆ ಮಾಡುವ ಗಣೇಶನ ನಿಮ್ಮಿತ್ತವಾಗಿ ಗೋ ಪೂಜೆ ಮತ್ತು ಹಂದರಗಂಬ ಪೂಜೆಯನ್ನು ಇಂದು ನೆರವೇರಿಸಲಾಯಿತು.

ಈ ವೇಳೆ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್, ನಗರಸಭೆ ಹಿರಿಯ ಸದಸ್ಯ ಶಂಕರ್ ಖಟಾವ್ಕರ್, ತಪೋವನ ಛೇರ್ಮನ್  ಶಶಿಕುಮಾರ್ ಮಾತನಾಡಿ, ನಗರದಲ್ಲಿ ಹಿಂದೂ ಮಹಾಗಣಪತಿ ಸೇವಾ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆ ವತಿಯಿಂದ ಗಣೇಶೋತ್ಸವದ ಆಚರಣೆಯನ್ನು ಹಲವಾರು ವರ್ಷಗಳಿಂದ   ಅದ್ಧೂರಿಯಾಗಿ ಮತ್ತು ಸಡಗರ ಸಂಭ್ರಮದಿಂದ ಜೊತೆಗೆ ಶ್ರದ್ಧಾ -ಭಕ್ತಿಯಿಂದ ಆಚರಿಸುತ್ತ ಬಂದಿದ್ದು ನಗರದ ಗಣೇಶೋತ್ಸವ ಆಚರಣೆ ರಾಜ್ಯಕ್ಕೇ ಮಾದರಿಯಾಗಿದೆ. 

ಹಿಂದೂ ಜಾಗರಣ ವೇದಿಕೆ ಮುಖಂಡ ಧರಣೇಂದ್ರ ಕುಮಾರ್ ಜೈನ್ ಸ್ವಾತಂತ್ರ್ಯೊ ತ್ಸವದ ವಿಚಾರಗಳ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅರ್ಜುನ್, ಬಿ.ಪಿ. ಹರೀಶ್, ಜಿ‌.ನಂಜಪ್ಪ, ಹೆಚ್.ಎಸ್. ರಾಘವೇಂದ್ರ, ಶಿವಪ್ರಕಾಶ್ ಶಾಸ್ತಿ, ಬಾತಿ ಚಂದ್ರಶೇಖರ್, ಬಸವನಗೌಡ, ದಿನೇಶ್, ಚಂದನ್ ಮೂರ್ಕಲ್, ಶಿವು, ಮಹೇಶ್, ರಟ್ಟಿಹಳ್ಳಿ ಮಂಜುನಾಥ್,  ಅದ್ವೈತ ಶಾಸ್ತ್ರಿ, ಶ್ರೀನಿವಾಸ್ ಚಂದಪೂರ್, ಧರಣೇಂದ್ರ ಕುಮಾರ್, ವೀರೇಶ್, ಕೃಷ್ಣ ಮೂರ್ತಿ ಶೆಟ್ಟಿ, ಕರಿಬಸಪ್ಪ ಕಂಚಿಕೇರಿ, ನಿರಂಜನ್, ಹೋವಳೆ ರವೀಂದ್ರ, ಅಮರಾವತಿ ನಾಗರಾಜ್, ಅರ್ಚಕ ವೆಂಕಟೇಶ್,  ರವಿಕುಮಾರ್,  ವಿನಾಯಕ ಆರಾಧ್ಯಮಠ, ಮಹಾಂತೇಶ್ ಬಂಢಾರಿ, ಪತ್ರಕರ್ತರಾದ ಎಂ. ಚಿದಾನಂದ ಕಂಚಿಕೇರಿ, ಹೆಚ್.ಸಿ. ಕೀರ್ತಿಕುಮಾರ್ ಸಂತೋಷ ಗುಡಿಮನಿ, ರೂಪಾ , ಸಾಕ್ಷಿ  ಇತರರು ಹಾಜರಿದ್ದರು.     

error: Content is protected !!