ರೇವಡಿಗುಂಟು ಹಣ, ರೈತರ ಯೋಜನೆಗಿಲ್ಲ ಧನ

ರೇವಡಿಗುಂಟು ಹಣ, ರೈತರ ಯೋಜನೆಗಿಲ್ಲ ಧನ

ನೀನು ದೊಡ್ಡವನಾದ ಮೇಲೆ ಏನಾಗುತ್ತೀಯ? ಎಂಬ ಪ್ರಶ್ನೆಗೆ ದಶಕಗಳ ಹಿಂದೆ ಡಾಕ್ಟರ್ ಇಲ್ಲವೇ ಇಂಜಿನಿಯರ್ ಎಂಬ ಉತ್ತರ ಸಾಮಾನ್ಯವಾಗಿ ಸಿಗುತ್ತಿತ್ತು. ಈಗ ಅದರ ಸಾಲಿಗೆ ಐಎಎಸ್ ಆಗುತ್ತೇನೆ ಎಂಬ ಉತ್ತರವೂ ಸೇರ್ಪಡೆಯಾಗಿದೆ. ಹೀಗಾಗಿಯೇ ಕಳೆದ ದಶಕದಲ್ಲಿ ಈ ಪರೀಕ್ಷೆಗೆ ಹಾಜರಾಗುವವರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.

ಕಳೆದ 2007ರಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಸಂಖ್ಯೆ 3.33 ಲಕ್ಷದಷ್ಟಿತ್ತು. ಅದು 2018ರಿಂದ ಹತ್ತು ಲಕ್ಷದ ಗಡಿ ದಾಟಿದೆ. ಇಷ್ಟಾದರೂ, 2007ರಲ್ಲಿ ಐನೂರರಷ್ಟು ಅಭ್ಯರ್ಥಿಗಳು ಆಯ್ಕೆಯಾಗಿದ್ದರೆ, ಈಗ ಸಾವಿರದಷ್ಟು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗುತ್ತಿದ್ದಾರೆ. ಪರೀಕ್ಷೆಗೆ ಹಾಜರಾಗುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದರಿಂದ ಸ್ಪರ್ಧೆಯೂ ಏರಿಕೆಯಾಗಿದೆ. 

ಆದರೆ, ಈ ಸ್ಪರ್ಧೆಯಿಂದ ಅನಾಹುತಗಳೂ ಹೆಚ್ಚಾಗಿವೆ. ಐಎಎಸ್ ಹುದ್ದೆಗಳನ್ನು ಪಡೆಯಲು ವರ್ಷಗಟ್ಟಲೆ ಬೆವರು ಹರಿಸಬೇಕಿದೆ. ಇದಕ್ಕಾಗಿ ಕೋಚಿಂಗ್ ಕೇಂದ್ರಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಯುವ ಪೀಳಿಗೆ ಈ ಪರೀಕ್ಷೆಗೆ ಶ್ರಮಿಸುವ ಒತ್ತಡವೂ ಏರುತ್ತಿದೆ. 

ದೆಹಲಿಯಲ್ಲಿ ಐಎಎಸ್ ಕೋಚಿಂಗ್ ಕೇಂದ್ರ ಒಂದರಲ್ಲಿ ನಡೆದ ಅವಘಡದ ಕಾರಣದಿಂದಾಗಿ ಕೋಚಿಂಗ್ ಕೇಂದ್ರಗಳ ಹಾವಳಿ ಕುರಿತು ತಕ್ಕ ಮಟ್ಟಿಗೆ ಚರ್ಚೆ ಆರಂಭವಾಗಿದೆ. ಆದರೆ ಚರ್ಚೆಯ ದಿಕ್ಕು ದೆಸೆ ಮಾತ್ರ ಕೋಚಿಂಗ್ ಕೇಂದ್ರಗಳ ಸುತ್ತ ಸೀಮಿತವಾಗಿದೆ.

ಮೂಲ ಸಮಸ್ಯೆ ಬಗ್ಗೆ ಚರ್ಚೆ ನಡೆಯುವ ಅಗತ್ಯವಿದೆ. ಈ ಬಗ್ಗೆ ಅಧಿಕಾರಸ್ಥರು ಗಮನ ಹರಿಸುತ್ತಿಲ್ಲ ಎನ್ನಿಸುತ್ತಿದೆ. ರಾಜಸ್ಥಾನದ ಕೋಟಾ ಮುಂತಾದ ಕೋಚಿಂಗ್ ತಾಣಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಈ ಹಿಂದೆ ಸಾಕಷ್ಟು ಚರ್ಚೆಯಾಗಿತ್ತು. ಸರ್ಕಾರ ಒಂದಿಷ್ಟು ಮಾರ್ಗಸೂಚಿಗಳನ್ನು ಪ್ರಕಟಿಸಿ ಈ ವಿಷಯಕ್ಕೆ ತೆರೆ ಎಳೆದಿತ್ತು. ಈ ಬಾರಿಯೂ ಐಎಎಸ್ ಕೋಚಿಂಗ್ ಕೇಂದ್ರಗಳ ವಿಷಯದಲ್ಲಿ ಇದೇ ಆಗುವುದರಲ್ಲಿ ಅನುಮಾನಗಳಿಲ್ಲ.

ಚುನಾವಣಾ ವೇಳೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಆದರೆ, ಈಗ `ಹಣ ಲಭ್ಯತೆ’ಯ ಆಧಾರದ ಮೇಲೆ ಬಿಡುಗಡೆ ಮಾಡುವುದಾಗಿ ಹೇಳುತ್ತಿದೆ.

ಸರ್ಕಾರಿ ಯೋಜನೆಗಳಿ ರುವುದು ದೇಶದ ಈಗಿನ ಪ್ರಗತಿ ಹಾಗೂ ಭವಿಷ್ಯದ ಸುಸ್ಥಿರತೆಗಾಗಿ. ಹೀಗಿರುವಾಗ ರೇವಡಿಗಳು ಆರೋಗ್ಯಕ್ಕೆ ಹಿತವಲ್ಲ ಎಂಬುದನ್ನು ಕನಿಷ್ಠ ಪ್ರಜ್ಞೆ ಇರುವ ಆರ್ಥಿಕ ಪರಿಣಿತರೂ ಹೇಳಬಲ್ಲರು. ಆದರೆ, ಭದ್ರಾ ಮೇಲ್ದಂಡೆ ರೀತಿಯ ಜನಹಿತದ ಯೋಜನೆಗಳಿಗೆ ಸರ್ಕಾರಗಳು ಹಣ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಾ, ಉಚಿತ ಕೊಡುಗೆಗಳಿಗೆ ಹಣ ನೀಡುತ್ತಾ ಹೋದರೆ ಏನೆನ್ನಬೇಕು?

ರೇವಡಿ ಪ್ರಿಯರು ಈಗ ಎಲ್ಲ ಪಕ್ಷದಲ್ಲೂ ಇದ್ದಾರೆ. ಚುನಾವಣೆ ಸನಿಹದಲ್ಲಿರುವಾಗ ಪೆಟ್ರೋಲ್ – ಡೀಸೆಲ್ ಬೆಲೆ ಸ್ಥಿರಗೊಳಿಸುವುದು ಇಲ್ಲವೇ ಕಡಿತಗೊಳಿಸುವುದು, ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಸುವುದು ಇವೆಲ್ಲವೂ ರೇವಡಿಗಿಂತ ಕಡಿಮೆಯೇನಲ್ಲ. ಇದರ ಜೊತೆಗೆ ಕೇಂದ್ರ ಸರ್ಕಾರ ಪಿಎಂ – ಕಿಸಾನ್ ಸಮ್ಮಾನ್ ನಿಧಿ ಹೆಸರಿನಲ್ಲಿ ಇದುವರೆಗೂ 3,24,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭದ್ರಾ ಮೇಲ್ದಂಡೆಗೆ ಬೇಕಾಗಿದ್ದು 5,300 ಕೋಟಿ ರೂ. ಮಾತ್ರ. ಕಿಸಾನ್ ಸಮ್ಮಾನ್ ಯೋಜನೆಯ ಶೇ.1.65ರಷ್ಟು ಹಣದಲ್ಲೇ ಭದ್ರಾ ಮೇಲ್ದಂಡೆಗೆ ಹಣ ಒದಗಿಸಬಹುದಿತ್ತು. ರಾಜ್ಯ ಸರ್ಕಾರ ಸಹ ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲ ಎಂಬುದನ್ನು ಹೊರತು ಪಡಿಸಿದರೆ, ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ತ್ವರಿತವಾಗಿಯೇ ಜಾರಿಗೆ ತಂದಿದೆ. ಈ ಭಾಗ್ಯ ಯೋಜನೆಗಳಿಗೆ ವರ್ಷಕ್ಕೆ ಒದಗಿಸುವ ಹಣದಲ್ಲಿ ಶೇ.5ರಷ್ಟರಲ್ಲೇ ಭದ್ರಾ ಮೇಲ್ದಂಡೆಗೆ ಕೇಂದ್ರ ಒದಗಿಸುವ ಹಣವನ್ನು ಸರಿದೂಗಿಸಬಹುದಿತ್ತು. ಆದರೆ, ಸರ್ಕಾರಗಳ ಆದ್ಯತೆಗಳು ಆ ರೀತಿ ಇಲ್ಲ. 

22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುಂಟುತ್ತಾ ಸಾಗಿದೆ. ಕರೆಂಟ್ ಸಂಪರ್ಕ ಸಮರ್ಪಕವಿಲ್ಲ, ಪೈಪ್ ಸರಿ ಇಲ್ಲ, ಎರಡು ಮೋಟರ್ ಇದ್ದರೂ – ನದಿಯಲ್ಲಿ ನೀರಿದ್ದರೂ ಸಮರ್ಪಕವಾಗಿ ಪಂಪ್ ಮಾಡಲು ಆಗುತ್ತಿಲ್ಲ. ಇಂತಹ ಯೋಜನೆಗಳಿಗೆ ಬೇಕಾದ ಕೆಲವು ಕೋಟಿ ರೂಪಾಯಿಗಳ ಅನುದಾನಕ್ಕಾಗಿ ಕಡತಗಳು ಸರ್ಕಾರಿ ಯಂತ್ರದಲ್ಲಿ ನಲುಗುತ್ತಿವೆ.

ಕೈಗಾರಿಕೆಗಳಿಗೆ ಅಗತ್ಯವಾದ ಹೆದ್ದಾರಿ, ವಿದ್ಯುತ್ ಇತ್ಯಾದಿಗಳಿಗೆ ಸರ್ಕಾರ ದೊಡ್ಡ ಪ್ರಮಾಣ ದಲ್ಲಿ ಹೂಡಿಕೆ ಮಾಡುತ್ತಿದೆ. ಬ್ರಾಂಡ್ ಬೆಂಗಳೂರು ನಿರ್ಮಿಸಲು ಸರ್ಕಾರಗಳು ಸಾವಿರಾರು ಕೋಟಿ ರೂ. ಹರಿಸುವುದಾಗಿ ಹೇಳುತ್ತಿವೆ. ಆದರೆ, ಕೃಷಿಗೆ ಅಗತ್ಯವಾದ ನೀರು ಒದಗಿಸುವ ಯೋಜನೆಗಳು ಮಾತ್ರ ಹಣವಿಲ್ಲದೇ ಬಳಲುತ್ತಿವೆ. 

ರೈತ ಪರ ಎಂದು ಹೇಳುವ ಪಕ್ಷಗಳು, ನೀರಾವರಿ ಹಾಗೂ ಕೆರೆ ತುಂಬಿಸುವ ಯೋಜನೆ ಗಳಿಗೆ ಹಣ ಕೊಡಲು ಹಿಂದೆ ಸರಿಯುವುದು ರೈತರ ಹಿತಕ್ಕೆ ವಿರುದ್ಧವಾಗಿದೆ. ಅದರಲ್ಲೂ ಮತಗಳಿಗಾಗಿ ಉಳ್ಳವರ ಬಾಯಿಗೆ ರೇವಡಿ ಎಂಬ ಸಿಹಿ ತುಂಬುತ್ತಾ, ರೈತರ ಯೋಜನೆಗಳಿಗೆ ಅನುದಾನ ಕೊಡದೇ ಕಹಿ ಉಣಿಸುವುದು ದೇಶದ ಈಗಿನ ಕಟು ವಾಸ್ತವ.


ಬಿ.ಜಿ. ಪ್ರವೀಣ್ ಕುಮಾರ್
ದಾವಣಗೆರೆ.

error: Content is protected !!