ರಸ್ತೆ ಗುರುಳಿದ ಮರ : ಗಂಟೆಗಳ ಕಾಲ ಸಂಚಾರ ಸ್ಥಗಿತ

ರಸ್ತೆ ಗುರುಳಿದ ಮರ : ಗಂಟೆಗಳ ಕಾಲ ಸಂಚಾರ ಸ್ಥಗಿತ

ಜಗಳೂರು, ಜು. 22 – ತಾಲ್ಲೂಕಿನ   ಅರಬಾವಿ, ಚಳ್ಳಕೆರೆ ಹೆದ್ದಾರಿಯ ರಸ್ತೆ ಕೆಚ್ಚೇನಹಳ್ಳಿ ಗ್ರಾಮದ ಬಳಿ  ರಸ್ತೆ ಬದಿಯ ಹುಣಸೆ ಹಣ್ಣಿನ ಧೈತ್ಯ ಕಾರದ ಮರ ಜೋರಾಗಿ ಬೀಸಿದ ಗಾಳಿಗೆ ರಸ್ತೆಯ ಮಧ್ಯಭಾಗಕ್ಕೆ ಬಿದ್ದ ಪರಿಣಾಮ ಎರಡು ಗಂಟೆಗೂ ಅಧಿಕ ಸಮಯ ರಸ್ತೆ ಸಂಚಾರ ಸ್ಥಗಿತವಾಗಿ ಪ್ರಯಾಣಿಕರು ಪರದಾಡುವಂತಾಯಿತು. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಪ್ರಣಾಪಾಯ ವಾಗಿಲ್ಲ. ದಶಕಗಳ ಹಿಂದಿನ ಹಳೇಯ ಮರ ಮದ್ಯಾಹ್ನ 2.30ರ ಸರಿಸುಮಾರಿಗೆ ಬಿದ್ದಿದ್ದು. ಸಂಜೆ 5 ಗಂಟೆಯವರೆಗೆ ತೆರವುಗೊಳಿಸ ಲಾಯಿತು. ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಆಗಮಿಸಿ, ಯಂತ್ರದ ಮೂಲಕ ತೆರವುಗೊಳಿಸಲಾಯಿತು.

ಕೊಟ್ಟೂರು-ಜಗಳೂರು ಮಾರ್ಗವಾಗಿ ತೆರಳುವ ಕೆಎಸ್ ಆರ್ ಟಿಸಿ ಬಸ್ ಸೇರಿದಂತೆ ಖಾಸಗಿಬಸ್, ಕಾರ್, ಸೇರಿದಂತೆ ಪ್ರಯಾಣಿಕರು ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಬಿದ್ದ ಮರವನ್ನು ತೆರವುಗೊಳಿಸಲು ಸಹಕರಿಸಿದರು.  ರಸ್ತೆ ಪಕ್ಕದಲ್ಲಿ ಹಳೇಯದಾಗಿರುವ ಧೈತ್ಯಾಕಾರದ ಮರಗಳ ಬೇರುಗಳು ಕೊಳೆಯುತ್ತಿದ್ದು. ಕೂಡಲೇ ಅಂತಹ  ತೆರವುಗೊಳಿಸಲು ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದರು.

error: Content is protected !!