ದಾವಣಗೆರೆ, ಜು.9- ಹಳೇ ಕುಂದುವಾಡದಲ್ಲಿ ಒಂದು ವಾರದ ಹಿಂದೆ ಮಸೀದಿ ಬಾಗಿಲು ಹೊಡೆದ ಖದೀಮರು, ಆಲಿ ದೇವರುಗಳನ್ನು ಕಳ್ಳತನ ಮಾಡಿದ್ದರು. ನಂತರ ಅಲಿ ದೇವರುಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿ, ಯಾರಿಗೂ ಅನುಮಾನ ಬಾರದಂತೆ ಸುತ್ತಲು ಕಾರದ ಪುಡಿಯನ್ನು ಚೆಲ್ಲಿ ಹೋಗಿದ್ದರು. ನಂತರ ಗ್ರಾಮಸ್ಥರು ದೇವರನ್ನು ಈ ರೀತಿ ಕಳ್ಳತನ ಮಾಡಿ, ನಂತರ ರಸ್ತೆ ಬದಿ ಬಿಸಾಡಿರುವ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮುಂದಿನ ವಾರ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಮಹಜರ್ ನಡೆಸಿ, ದೇವರುಗಳನ್ನು ಸಮಾಜದ ಮುಖಂಡರಿಗೆ ಹಸ್ತಾಂತರಿಸಿದರು.
December 29, 2024